ಪುತ್ತೂರು: ಕೊಳ್ತಿಗೆ ಅಂಗನವಾಡಿ ಕೇಂದ್ರದಲ್ಲಿ ಅ.8ರಂದು ಪೌಷ್ಠಿಕ ಆಹಾರ ಸಪ್ತಾಹದ ಅಂಗವಾಗಿ ಪೋಷಣ್ ಅಭಿಯಾನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು, ಶಿಶು ಅಭಿವೃದ್ಧಿ ಯೋಜನೆ ಕೊಳ್ತಿಗೆ ವಲಯದ ಮೇಲ್ವಿಚಾರಕಿ ಸುಲೋಚನಾ ದೀಪ ಪ್ರಜ್ವಲನೆ ಮಾಡಿ, ಪೌಷ್ಠಿಕ ಆಹಾರ ಸಪ್ತಾಹದ ಉದ್ಧೇಶದ ಬಗ್ಗೆ ತಿಳಿಸಿದರು.

ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಇಲಾಖೆಯ ಕಿರಿಯ ಸುರಕ್ಷಾಧಿಕಾರಿ ಅಕ್ಷತಾ ಮಾತನಾಡಿ, ವಿಟಮಿನ್ಗಳ ಬಗ್ಗೆ ಮತ್ತು ಪೌಷ್ಠಿಕ ಆಹಾರದ ಪ್ರಾಮುಖ್ಯತೆ ತಿಳಿಸಿದರು. ಗ್ರಾ.ಪಂ. ಸದ್ಯ ಬಾಲಕೃಷ್ಣ ಪಡ್ರೆ ಕೆಮ್ಮಾರ ಮಾತನಾಡಿದರು.
ವೇದಿಕೆಯಲ್ಲಿ ಸೊಸೈಟಿ ಪ್ರತಿನಧಿ ನಳಿನಿ, ಗ್ರಾ.ಪಂ. ಸದಸ್ಯೆ ವೇದಾವತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅ.31ರಂದು ನಿವೃತ್ತಿಗೊಳ್ಳಲಿರುವ ಕೊಳ್ತಿಗೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪುಷ್ಪಾವತಿ ಎ. ಅವರನ್ನು ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಸನ್ಮಾನಿಸಿದರು. ಅಂಗನವಾಡಿ ಕೇಂದ್ರದ ಹಳೆ ವಿದ್ಯಾರ್ಥಿ, ಸಂಘದ ಕಾರ್ಯದರ್ಶಿ ವನಿತಾ ಬಿ.ಕೆ. ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರ ಸಹಾಯಕಿ ಕೆ. ಲೋಲಾಕ್ಷಿ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯೆ ಬಿ.ಶಾರದಾ ಸಹಕರಿಸಿದರು.