ಶಾಖೆಪುರ ಹಾ.ಉ. ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

1.75 ಲಕ್ಷ ರೂ.ನಿವ್ವಳ ಲಾಭ | ಶೇ.10 ಡಿವಿಡೆಂಡ್, ಲೀ.ಹಾಲಿಗೆ 49 ಪೈಸೆ ಬೋನಸ್ ಘೋಷಣೆ

ಹಿರೇಬಂಡಾಡಿ: ಶಾಖೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಶಾಖೆಪುರದಲ್ಲಿರುವ ಸಂಘದ ಆವರಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ರಶ್ಮಿ ಕೆ.ಖಂಡಿಗ ಮಾತನಾಡಿ, 2024-25ನೇ ಸಾಲಿನಲ್ಲಿ ಸಂಘವು 1,75,289.41 ರೂ. ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ನಿಯಮಾನುಸಾರ ಹಂಚಿಕೆ ಮಾಡಲಾಗಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 49 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದರು. ಸದಸ್ಯರ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಶುದ್ಧ ಹಾಗೂ ಕಲಬೆರಕೆ ರಹಿತ ಹಾಲು ಸಂಘಕ್ಕೆ ನೀಡಿ ಸಂಘದ ಅಭಿವೃದ್ಧಿಯಲ್ಲಿ ಸದಸ್ಯರು ಕೈಜೋಡಿಸುವಂತೆ ಹೇಳಿದರು. ವಿಸ್ತರಣಾಧಿಕಾರಿ ಮಾಲತಿ ಅವರು ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಪ್ರತಿಭಾಪುರಸ್ಕರ
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.

ನಿರ್ದೇಶಕರಿಗೆ ಗೌರವಾರ್ಪಣೆ
ಕಳೆದ 10ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಂಘದ ನಿರ್ದೇಶಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸದಸ್ಯರಿಗೆ ಬಹುಮಾನ
2024-25ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಮಲವಿಶ್ವನಾಥ ಪೆರ್ಲ(ಪ್ರಥಮ), ಲೀಲಾಚೆನ್ನಪ್ಪ ಗೌಡ ಪೆರ್ಲ(ದ್ವಿತೀಯ) ಹಾಗೂ ಕೋಮಲರೋಹಿತ್ ಸರೋಳಿ(ತೃತೀಯ)ಬಹುಮಾನ ಪಡೆದುಕೊಂಡರು. ಸಂಘಕ್ಕೆ ಹಾಲು ಹಾಕಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಸಂಘದ ಉಪಾಧ್ಯಕ್ಷೆ ಕಮಲ ಪೆರ್ಲ, ನಿರ್ದೇಶಕರಾದ ಜಯಲಕ್ಷ್ಮೀ ಕೇಪುಳು, ಜಾನಕಿ ಕುಕ್ಕುನೋಡಿ, ಲೀಲಾವತಿ ಸರೋಳಿ, ಕಮಲಾಕ್ಷಿ ಪಾಜಳಿಕೆ, ಪುಷ್ಪಾವತಿ ಕೆರ್ನಡ್ಕ, ಜಾನಕಿ ಲಾವತ್ತಡಿ, ಶ್ರೀಮತಿ ಪಿ.ರೈ ಪಟ್ಟೆ, ನಳಿನಿ ಕೇದಗೆದಡಿ, ಜಾನಕಿ ಕೇದಗೆದಡಿ, ಕೋಮಲ ಸರೋಳಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಅನಿತಾಸರೋಳಿ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಹಾಲು ಪರೀಕ್ಷಕಿ ಮಮತಾ ಸಹಕರಿಸಿದರು.

LEAVE A REPLY

Please enter your comment!
Please enter your name here