ಪುತ್ತೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ (Spot Light Fight) ಟ್ಯಾಲೆಂಟ್ಸ್ ಡೇ ಸಾಹಿತ್ಯ ಸಂಘದ ವತಿಯಿಂದ ನಡೆಯಿತು.
ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ೪ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಕ್ರಿಯೇಟರ್ ತಂಡವು ಪ್ರಥಮ ಸ್ಥಾನವನ್ನು , ಬಿಲ್ಡರ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಇವರು ಅತ್ಯುತ್ತಮ ಕಾರ್ಯಕ್ರಮ ನಿರೂಪಕರಾಗಿ, ತೃತೀಯ ಬಿ.ಎ ವಿದ್ಯಾರ್ಥಿ ಚಿಂತನ್ ಅತ್ಯುತ್ತಮ ನಟನಾಗಿ ಮತ್ತು ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಅತ್ಯುತ್ತಮ ನಟಿಯಾಗಿ ಸ್ಥಾನವನ್ನು ಗಳಿಸಿಕೊಂಡರು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ರಶ್ಮಿ ಅಶ್ವಿನ್ ಶೆಟ್ಟಿ, ಪ್ರಾಂಶುಪಾಲರಾದ ಡಾ. ರಾಜಲಕ್ಷ್ಮೀ ಎಸ್ ರೈ, ಉಪಪ್ರಾಂಶುಪಾಲರಾದ ಶೇಷಗಿರಿ ಎಂ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಮಂಜುನಾಥ, ಗಾಯತ್ರಿ ಹಾಗೂ ಸ್ವಾತಿಪ್ರಿಯಾ ಕಾರ್ಯನಿರ್ವಹಿಸಿದರು. ಪ್ರತಿಭಾ ಭಟ್ ಸ್ವಾಗತಿಸಿ, ವಾಗ್ದೇವಿ ವಂದಿಸಿದರು. ಬಹುಮಾನ ವಿತರಣೆಯನ್ನು ಶಿವಪ್ರಸಾದ್ ಕೆ.ಆರ್ ಮತ್ತು ಕೌಸಲ್ಯಾ ನೆರವೇರಿಸಿದರು.