ಪುತ್ತೂರು: ದ.ಕ.ಜಿಲ್ಲಾ ಪಂಚಾಯತ್, ಜಲಜೀವನ್ ಮಿಷನ್(ಜೆಜೆಎಂ) ಮತ್ತು ಸ್ವಚ್ಚ ಭಾರತ ಮಿಷನ್(ಗ್ರಾ) (ಎಸ್ಬಿಎಂ) ಯೋಜನೆಗಳಡಿಯಲ್ಲಿ ಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮದ ಪ್ರಯುಕ್ತ ಮಾಹಿತಿ ಕಾರ್ಯಕ್ರಮ ಪಾಣಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಜೆಜೆಎಂ.ನ ದ.ಕ.ಜಿಲ್ಲಾ ಸಂಯೋಜಕ ಮಿಥುನ್ ನಾಯಕ್ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಆಶಾ ಸ್ವಾಗತಿಸಿ ವಂದಿಸಿದರು. ಉಪಾಧ್ಯಕ್ಷೆ ಜಯಶ್ರೀ, ಸದಸ್ಯರುಗಳಾದ ವಿಮಲ, ಸುಲೋಚನ, ಭಾರತಿ ಭಟ್, ಅಬೂಬಕ್ಕರ್, ಸುಭಾಸ್ ರೈ, ಮೋಹನ್ ನಾಯ್ಕ್, ನಾರಾಯಣ ನಾಯಕ್ ಉಪಸ್ಥಿತರಿದ್ದರು.