ಪುತ್ತೂರು: ೧೦೨ ವರ್ಷಗಳ ಇತಿಹಾಸವಿರುವ ಭಾಲಾವಲಿಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಇದರ ಆಡಳಿತ ಮಂಡಳಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ವಿನ್ನರ್ ಸಾಫ್ಟ್ಡ್ರಿಂಕ್ಸ್ನ ಮ್ಹಾಲಕ ರಮೇಶ್ ಪ್ರಭು ಸಂಪ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಪ್ರಭು ಕುಂಟುನಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ೨೦೨೫-೨೦೨೮ ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಾಲಕೃಷ್ಣ ನಾಯಕ್ ಅಜೇರು ತೆಂಕಿಲ, ಕೋಶಧಿಕಾರಿಯಾಗಿ ಹರೀಶ್ ಬೋರ್ಕರ್ ಕತ್ತಲಕಾನ. ಜೊತೆ ಕಾರ್ಯದರ್ಶಿಯಾಗಿ ಮಲ್ಲಿಕಾ ಕುಕ್ಕಾಡಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕರಾಗಿ ರಾಧಾಕೃಷ್ಣ ಬೋರ್ಕರ್ ಕತ್ತಲಕಾನ, ಜಯಂತ್ ಪೊರೋಲಿ, ರವೀಶ್ ಪೊಸವಳಿಕೆ ಪುಣಚ, ನಾರಾಯಣ ನಾಯಕ್ ಪುತ್ತೂರು, ದೇವಕಿ ಸಂಟ್ಯಾರು, ಮುರಳೀಧರ ನಾಯಕ್ ನಾಟೆಕಲ್ಲು, ಕಿರಣ್ ಪ್ರಭು ಮುಂಡಕೊಚ್ಚಿ, ಕೃಷ್ಣಪ್ರಸಾದ್ ನಡ್ಸಾರ್, ಚಂದ್ರಶೇಖರ ನಾಯಕ್ ಪೊರೋಲಿ, ಬಿ. ಆರ್. ಶುಭಕರ ರಾವ್ ಪಿಲಿಪಂಜರ, ಮತ್ತು ಗೌರವ ಸದಸ್ಯರಾಗಿ ಹರಿಪ್ರಸಾದ್ ಎಮ್. ಪುಂಡಿಕಾಯಿ, ಶ್ರೀಹರಿ ಆದಾಳ, ಸುರೇಶ್ ಪ್ರಭು ತೆಂಕಿಲ ಆಯ್ಕೆಯಾಗಿದ್ದಾರೆ.