ಪುತ್ತೂರು: ಹೆಜ್ಜೇನು ದಾಳಿಗೆ ಇಬ್ಬರು ವಿದ್ಯಾರ್ಥಿಗಳು ಮತ್ತು ಅವರ ರಕ್ಷಣೆಗೆ ಹೋದ ವ್ಯಕ್ತಿ ಸಹಿತ ಮೂವರು ತೀವ್ರ ಗಾಯಗೊಂಡ ಘಟನೆ ಸೇಡಿಯಾಪು ಸಮೀಪದ ಕೂಟೇಲು ಎಂಬಲ್ಲಿ ನಡೆದಿದೆ.
ಅ.10 ರಂದು ಸಂಜೆ ವಿದ್ಯಾರ್ಥಿಗಳಾದ ಪಡ್ನೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ಇಶಾ (7ವ) ಮತ್ತು ಕಿಶೋರ್ ಎಂಬವರ ಪುತ್ರ ಪ್ರತ್ಯೂಶ್(10 ವ) ಮತ್ತು ಸ್ಥಳೀಯ ನಾರಾಯಣ್ (40ವ) ಹೆಜ್ಜೇನು ದಾಳಿಗೊಳಗಾದವರು. ವಿದ್ಯಾರ್ಥಿಗಳಿಬ್ಬರು ಸಂಜೆ ಮನೆಗೆ ತೆರಳುತ್ತಿದ್ದಾಗ ಕೂಟೇಲು ಸಮೀಪ ಹೆಜ್ಜೇನುಗಳು ಏಕಾ ಏಕಿ ವಿದ್ಯಾರ್ಥಿಗಳಿಬ್ಬರ ಮೇಲೆ ದಾಳಿ ಮಾಡಿದೆ. ವಿದ್ಯಾರ್ಥಿಗಳು ಕಿರುಚಾಡುವುದನ್ನು ಕೇಳಿ ಸ್ಥಳೀಯರಾದ ನಾರಾಯಣ್ ಎಂಬವರು ವಿದ್ಯಾರ್ಥಿಗಳ ರಕ್ಷಣೆಗೆ ಬಂದಿದ್ದರು. ಈ ವೇಳೆ ಹೆಜ್ಜೇನು ಅವರಿಗೂ ಕಚ್ಚಿದೆ. ಗಾಯಗೊಂಡ ನಾರಾಯಣ್ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿದ್ಯಾರ್ಥಿಗಳಿಬ್ಬರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಳುಗಳ ಪೈಕಿ ತೀವ್ರ ಅಸ್ವಸ್ಥಗೊಂಡ ಇಶಾ ಎಂಬವರನ್ನು ಅ.11 ರಂದು ಬೆಳಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.