ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅ.18ರಂದು ವಿಶೇಷವಾಗಿ ನಡೆಯಲಿರುವ ಸಾರ್ವಜನಿಕ ಶುದ್ದ ಎಳ್ಳೆಣ್ಣೆ ಅಭಿಷೇಕಕ್ಕೆ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕ ವತಿಯಿಂದ 5 ಲೀಟರ್ ಎಳ್ಳೆಣ್ಣೆ ಅ.13ರಂದು ಸಮರ್ಪಿಸಲಾಯಿತು.
ಪ್ರತಿಷ್ಠಾನದ ಜಿಲ್ಲಾ ಸಂಚಾಲಕ ಭಾಸ್ಕರ್ ಬಾರ್ಯ, ಉಪಾಧ್ಯಕ್ಷರುಗಳಾದ ಲೋಕೇಶ್ ಹೆಗ್ಡೆ, ದುಗ್ಗಪ್ಪ ನಡುಗಲ್ಲು, ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ್ ಆಳ್ವ ಪಡುಮಲೆ, ಸಂಚಾಲಕ ಭವಾನಿಶಂಕರ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ಆನಾರ್, ಸದಸ್ಯರಾದ ಪದ್ಮನಾಭ ನಾಯಕ್, ಚಂಚಲಾಕ್ಷಿ ಪದ್ಮನಾಭ ನಾಯಕ್ ಉಪಸ್ಥಿತರಿದ್ದರು. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಿದರು.