ಪುತ್ತೂರು:ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3181ಇದರ ಜಿಲ್ಲಾ ಗವರ್ನರ್ ರಾಮಕೃಷ್ಣ ಇವರು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಪುತ್ತೂರು ಜೈನ ಬಸದಿ ಹತ್ತಿರದ ಪ್ರತಿಷ್ಠಿತ ಜೈನ ಮನೆತನಗಳಲ್ಲಿ ಒಂದಾದ ದಿ.ವಾರಿಸೇನ ಶೆಟ್ಟಿಯವರ ಮೊಮ್ಮಗಳು ಹಾಗೂ ರಾಜೇಶ್ ಕುಮಾರ್ ಮತ್ತು ರಶ್ಮಿ ರಾಜೇಶ್ ರವರ ಸುಪುತ್ರಿ ರಾಶಿ ಶೆಟ್ಟಿ ಇವರನ್ನು ರೋಟರಿ ಮನಿಷಾ ಹಾಲ್ ಪುತ್ತೂರು ಇಲ್ಲಿ ಸನ್ಮಾನಿಸಲಾಯಿತು.
ಸನ್ಮಾನಿತೆಯವರು ಬಾಲ್ಯದಲ್ಲಯೇ ವಿಜಯ ಕರ್ನಾಟಕ ದಿನಪತ್ರಿಕೆಯು ನಡೆಸಿದ ಮುದ್ದು ಕಂದ ಫೋಟೋ ಸ್ಪರ್ದೆಯಲ್ಲಿ ಭಾಗವಹಿಸಿ ಮೂರು ವರ್ಷ ವಿಜೇತರಾಗಿ ಬಹುಮಾನವನ್ನು ಗಳಿಸಿರುತ್ತಾರೆ. ಉದಯವಾಣಿ ದಿನಪತ್ರಿಕೆಯು ನಡೆಸಿರುವ ಮುದ್ದು ಕಂದ ಫೋಟೋ ಸ್ಪರ್ದೆಯಲ್ಲಿ ಭಾಗವಹಿಸಿ ಅಲ್ಲಿಯೂ ಕೂಡಾ ಬಹುಮಾನವನ್ನು ಪಡೆದಿರುತ್ತಾರೆ. ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಸಿದ ಮುದ್ದು ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಪೇಜಾವರ ಶ್ರೀಗಳಿಂದ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ವಿಜಯ ಕರ್ನಾಟಕ ದಿನ ಪತ್ರಿಕೆಯು ಮಂಗಳೂರಿನಲ್ಲಿ ನಡೆಸಿದ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಬಹುಮಾನವನ್ನು ಗಳಿಸಿದ್ದು, ಅಬಕಾಸ್ ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಇವರ ಶಿಷ್ಯೆಯಾಗಿ ಹಲವಾರು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇವರು ಓರ್ವ ಉತ್ತಮ ಈಜು ಪಟುವಾಗಿದ್ದು ಸುಗಮ ಸಂಗೀತವನ್ನು ಕೂಡಾ ಅಭ್ಯಾಸ ಮಾಡುತ್ತಿದ್ದಾರೆ.
ಸನ್ಮಾನಿತೆ ರಾಶಿರವರ ಅಭಿನಂದನೆಯ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಭಾಶ್ ರೈ ಬೆಳ್ಳಿಪ್ಪಾಡಿ, ವಲಯ 5ರ ಸಹಾಯಕ ಗವರ್ನರ್ ಪ್ರಮೀಳಾ ರಾವ್, ವಲಯ ಸೇನಾನಿ ಸುರೇಶ್ ಪಿ, ಕ್ಲಬ್ ಜಿ.ಎಸ್.ಆರ್. ಚಿದಾನಂದ ಬೈಲಾಡಿ, ಕಾರ್ಯದರ್ಶಿ ಆಶಾ ಮರಿಯಾ ರೆಬೆಲ್ಲೋ ಹಾಗೂ ರೋಟರಿ ಕ್ಲಬ್ ಸ್ವರ್ಣ ಇದರ ಸದಸ್ಯರು ಹಾಗೂ ಇತರ ರೋಟರಿ ಕ್ಲಬ್ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಹೇಶ್ ಕೆ ಸವಣೂರು ಇವರು ನಿರ್ವಹಿಸಿದರು.