ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ ಅ.18 ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5ರವರೆಗೆ ಕಾಂಚನ, ಉಪ್ಪಿನಂಗಡಿ ಎಕ್ಸ್‌ಪ್ರೆಸ್ ಮತ್ತು ಉಪ್ಪಿನಂಗಡಿ ಓಲ್ಡ್ ಫೀಡರ್‌ಗಳಿಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು, ಶಾಂತಿನಗರ, ದಾರಂದಕುಕ್ಕು ಮತ್ತು ಬೆಳ್ಳಿಪ್ಪಾಡಿ ವ್ಯಾಪ್ತಿಯ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ತುರ್ತು ಕಾಮಗಾರಿ ನಿಮಿತ್ತ ಅ.18ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5ರವರೆಗೆ ಪುತ್ತೂರು ಟೌನ್ ಓಲ್ಡ್ ಮತ್ತು ರಾಮಕುಂಜ ಫೀಡರ್‌ನ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೋರ್ಟ್ ರೋಡ್, ಮಿನಿ ವಿಧಾನ ಸೌಧ, ಚೇತನಾ ಹಾಸ್ಪಿಟಲ್, ಪರ್ಲಡ್ಕ, ಗೋಳಿಕಟ್ಟೆ, ಕುಂಜೂರು ದೇವಸ್ಥಾನ, ಸರಕಾರಿ ಆಸ್ಪತ್ರೆ, ಬೊಳ್ವಾರು ಮತ್ತು ರಾಮಕುಂಜ ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.