ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್‌ನಲ್ಲಿ ದೀಪಾವಳಿ ಬಿಗ್ ಸೇಲ್ ಆರಂಭ

0

ಪುತ್ತೂರು: ಗ್ರಾಮೀಣ ಭಾಗದ ಜನರ ಮನೆ,ಮನ ಮೆಚ್ಚಿದ ಭರವಸೆಯ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ನ ಏಕೈಕ ಶೋರೂಮ್ ಆಗಿರುವ ಕುಂಬ್ರದ ಹೃದಯ ಭಾಗದಲ್ಲಿರುವ ಅಕ್ಷಯ ಆರ್ಕೇಡ್‌ನಲ್ಲಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ಈ ವರ್ಷದ ದೀಪಾವಳಿ ಹಬ್ಬದ ಬಿಗ್ ಸೇಲ್ ಆರಂಭಗೊಂಡಿದೆ. ಗೃಹೋಪಯೋಗಿ ವಸ್ತುಗಳ ಮೇಲೆ ಬಿಗ್ ಡಿಸ್ಕೌಂಟ್, ಪ್ರತಿ ಖರೀದಿಯ ಮೇಲೂ ಖಚಿತ ಉಡುಗೊರೆಗಳು. ವಿಶೇಷ ರಿಯಾಯಿತಿ, ಎಕ್ಸ್‌ಚೇಂಜ್, ಕಾಂಭೀ ಆಫರ್, ಕ್ಯಾಶ್‌ಬ್ಯಾಕ್, ಸುಲಭ ಕಂತುಗಳು ಎಲ್ಲವೂ ಸಿಗಲಿದೆ. ಕೆಲವೊಂದು ಷರತ್ತುಗಳ ಅನ್ವಯದಂತೆ ಗ್ರಾಹಕರಿಗೆ ಈ ಹಬ್ಬದ ಫುಲ್ ಧಮಾಕ ಸಿಗಲಿದೆ. ಹಾಗಾದರೆ ತಡ ಯಾಕೆ ಇಂದೇ ಕುಂಬ್ರದ ಅತಿಥಿ ಶೋರೂಮ್‌ಗೆ ಬನ್ನಿ ನಿಮ್ಮಿಷ್ಟದ ಅತಿಥಿಯೊಂದಿಗೆ ನಿಮ್ಮ ಮನೆ,ಮನ ತುಂಬಿಸಿಕೊಳ್ಳುವ ಮೂಲಕ ದೀಪಾವಳಿಯನ್ನು ಸಂಭ್ರಮಿಸಿ…


ಬಿಸಿಲಿನ ತಾಪಕ್ಕೆ ತಣ್ಣನೆಯ ಜ್ಯೂಸ್ ಕುಡಿಯಲು ಮನೆಗೊಂದು ರೆಫ್ರಿಜರೇಟರ್ ಅಗತ್ಯ. ಅತಿಥಿಯಲ್ಲಿ ಈ ಹಬ್ಬಕ್ಕೆ ಭಾರೀ ರಿಯಾಯಿತಿ ಮೇಲೆ ರೆಫ್ರಿಜರೇಟರ್‌ಗಳನ್ನು ಖರೀದಿಸುವ ಅವಕಾಶವಿದೆ. ಫಿಕ್ಸೆಡ್ ಇಎಂಐ, ಶೇ.೦ ಮುಂಗಡ ಪಾವತಿಯ ಅವಕಾಶವಿದೆ. ಇದೇ ರೀತಿ ಎಲ್‌ಜಿ ಕಂಪೆನಿಯ ರೆಫ್ರಿಜರೇಟರ್‌ಗಳ ಮೇಲೂ ಕ್ಯಾಶ್‌ಬ್ಯಾಕ್, ಫಿಕ್ಸೆಡ್ ಇಎಂಐ ಇದೆ.
ಎಲ್ಲಾ ಕಂಪೆನಿಯ ಟಿವಿಗಳು ಅತಿಥಿಯಲ್ಲಿ ಲಭ್ಯವಿದ್ದು ಜಿಎಸ್‌ಟಿಯಲ್ಲಿ ಶೇ.1೦ ಇಳಿಕೆಗೊಂಡಿರುವುದರಿಂದ ಅತೀ ಕಡಿಮೆ ಬೆಲೆಯಲ್ಲಿ ಇಲ್ಲಿ ಟಿವಿಗಳನ್ನು ಖರೀದಿಸಬಹುದಾಗಿದೆ. ಎಲ್‌ಜಿ, ಸೋನಿ, ಸ್ಯಾಮ್‌ಸಂಗ್ ಕಂಪೆನಿಗಳ ಟಿವಿಗಳ ಮೇಲೆ 3 ವರ್ಷಗಳ ಪೆನೆಲ್ ವಾರಂಟಿಯನ್ನು ಪಡೆಯಬಹುದಾಗಿದೆ. ಇದಲ್ಲದೆ ಕೆಲವೊಂದು ಟಿವಿ ಖರೀದಿಯ ಜೊತೆ ಸ್ಟೆಬಿಲೈಸರ್ ಉಚಿತವಾಗಿ ದೊರೆಯುತ್ತದೆ. ನಿಮ್ಮ ಹಳೆಯ ಟಿವಿಗಳನ್ನು ಆಕರ್ಷಕ ಬೆಲೆಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವೂ ಇದೆ.


ಅತಿಥಿಯಲ್ಲಿ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ವಾಷಿಂಗ್ ಮೆಷಿನ್‌ಗಳು ಲಭ್ಯವಿದ್ದು ಈ ದೀಪಾವಳಿಗೆ ಬಿಗ್ ಆಫರ್ ಮೇಲೆ ವಾಷಿಂಗ್ ಮೆಷಿನ್ ಖರೀದಿಸುವ ಅವಕಾಶವಿದೆ. ನಿಮ್ಮಲ್ಲಿರುವ ಹಳೆಯ ವಾಷಿಂಗ್ ಮೆಷಿನ್ ಅನ್ನು ಹೊಸ ವಾಷಿಂಗ್‌ಮೆಷಿನ್ ಜೊತೆ ಆಕರ್ಷಕ ಬೆಲೆಯಲ್ಲಿ ಬದಲಾಯಿಸಿಕೊಳ್ಳುವ ಅವಕಾಶವಿದೆ. ವಿವೋ, ನೊಕಿಯೋ, ಓಪ್ಪೋ, ಸ್ಯಾಮ್‌ಸಂಗ್ ಸೇರಿದಂತೆ ಎಲ್ಲಾ ಬ್ರ್ಯಾಡೆಂಡ್ ಕಂಪೆನಿಯ ಮೊಬೈಲ್ ಫೋನ್‌ಗಳು ಸುಲಭ ಕಂತುಗಳಲ್ಲೂ ಲಭ್ಯವಿದ್ದು ವಿಶೇಷ ಆಪರ್ ಜೊತೆ ಮೊಬೈಲ್ ಗ್ಲಾಸ್, ಎಕ್ಸಸಸರೀಸ್ ಆಕರ್ಷಕ ಉಡುಗೊರೆಗಳನ್ನು ಪಡೆಯಬಹುದಾಗಿದೆ. ಐಪೋನ್‌ಗಳ ಮೇಲೆ ಭಾರೀ ರಿಯಾಯಿತಿ ಇದೆ. ಮನೆಗೆ ಬೇಕಾದ ಎಲ್ಲಾ ರೀತಿಯ ಉತ್ಕೃಷ್ಟ ಗುಣಮಟ್ಟದ ಫರ್ನಿಚರ‍್ಸ್‌ಗಳು ಅತಿಥಿಯಲ್ಲಿ ಲಭ್ಯವಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದ ಫರ್ನಿಚರ‍್ಸ್‌ಗಳು ಮಾತ್ರ ಇಲ್ಲಿ ಲಭ್ಯವಿದೆ. ಗ್ರಾಹಕರಿಗೆ ಯಾವುದೇ ರೀತಿಯ ಮೋಸವಾಗದ ಫರ್ನಿಚರ‍್ಸ್‌ಗಳ ಬೃಹತ್ ಸಂಗ್ರಹವಿದೆ. ಅತಿಥಿ ತನ್ನೆಲ್ಲಾ ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತಿದೆ. ಬಜಾಜ್, ಟಿವಿಎಸ್ ಸೇರಿದಂತೆ ಹಲವು ಫೈನಾನ್ಸ್ ಕಂಪೆನಿಗಳ ಮೂಲಕ ಸುಲಭ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಆಕರ್ಷಕ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು. 1 ಇಎಂಐ ಆಫ್ ಸೌಲಭ್ಯವೂ ದೊರೆಯಲಿದೆ. ಕಡಿಮೆ ದಾಖಲೆಗಳ ಮೂಲಕ ಗ್ರಾಹಕರಿಗೆ ಶೋರೂಮ್‌ನಲ್ಲೇ ಫೈನಾನ್ಸ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ.


ಅತಿಥಿ ಮಾರಾಟ ಮತ್ತು ಸರ್ವೀಸ್‌ಗೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸರ್ವೀಸ್‌ನಲ್ಲಿ ಗ್ರಾಮೀಣ ಭಾಗದ ಜನರಿಂದ ನಂಬರ್ 1 ಶೋರೂಮ್ ಎಂದೇ ಕರೆಸಿಕೊಂಡಿರುವ ಅತಿಥಿಯಲ್ಲಿ ಗುಣಮಟ್ಟಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ಮನೆಗೆ ಬೇಕಾದ ಎಲ್ಲಾ ಬಗೆಯ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ಗಳು ಒಂದೇ ಸೂರಿನಡಿ ಲಭ್ಯವಿದ್ದು ಗುಣಮಟ್ಟವೇ ಅತಿಥಿಯ ಧ್ಯೇಯವಾಗಿರುವುದರಿಂದ ಇಲ್ಲಿ ಖರೀದಿಸುವ ಪ್ರತಿಯೊಂದು ಐಟಮ್‌ಗಳಲ್ಲೂ ಒಂದು ಆರಾಮದಾಯಕ ಅನುಭವವನ್ನು ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here