ಕ್ಯಾಂಪ್ಕೋದಿಂದ ಸಹಾಯಧನ ವಿತರಣೆ

0

ಪುತ್ತೂರು: ಕ್ಯಾಂಪ್ಕೋ ಸಂಸ್ಥೆ ಮಂಗಳೂರು ಇದರ ವತಿಯಿಂದ ಸಾಂತ್ವನ ʼಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತʼ ಎಂಬ ಯೋಜನೆಯಡಿಯಲ್ಲಿ ಬಾಯಾರು ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯರಾದ ಇಬ್ರಾಹಿಂ ಪಲ್ಲಕುಡೇಲ್ ಪೈವಳಿಕೆ ಇವರ ಪುತ್ರರಾದ ಅಬ್ದುಲ್ ಅಜೀಜ್ ರವರ ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆಗಾಗಿ ಸಹಾಯಧನ ರೂ.3,00,000/-ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷರಾದ ಶಂಕರ್ ನಾರಾಯಣ ಭಟ್ ಖಂಡಿಗೆ ಇವರು ಅ.16ರಂದು ಬಾಯಾರು ಶಾಖೆಯಲ್ಲಿ ಹಸ್ತಾಂತರಿಸಿದರು.

ಕ್ಯಾಂಪ್ಕೋ ನಿರ್ದೆಶಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಬಾಲಕೃಷ್ಣ. ರೈ ಬಾನೊಟ್ಟು, ಕ್ಯಾಂಪ್ಕೋ ಬದಿಯಡ್ಕ ವಲಯಪ್ರಬಂಧಕರಾದ ಚಂದ್ರ ಯಂ ಬಾಯಾರು, ಶಾಖಾ ಪ್ರಬಂಧಕರಾದ ರಮೇಶ್ ವೈ, ಮತ್ತು ಬಾಯರು ಕ್ಯಾಂಪ್ಕೋ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here