ಪುತ್ತೂರು: ಪಡುಮಲೆ ಮದಕ ರಾಜರಾಜೇಶ್ವರಿ ಕ್ಷೇತ್ರಕ್ಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನೖಾಕ್ ಅ. 17 ರಂದು ಭೇಟಿ ನೀಡಿ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಸ್ವರ್ಣ ಕೇದಗೆ ಮೊಟ್ಟೆ ಆಕಾರದಲ್ಲಿ ಕೂವೆತೋಟ ಪಿಜನಾರ್ ಬ್ರಾಹ್ಮಣರಿಗೆ ಸಿಕ್ಕಿರುವ ಪ್ರಸಿದ್ಧ ಕೆರೆ ಹಾಗೂ ಮಾಯಿಲ್ತಿ ಮಾಯವಾದ ಸ್ಥಳಗಳ ವೀಕ್ಷಣೆ ಮಾಡಿದರು.
ಈ ಸಂಧರ್ಭದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಪಡುಮಲೆ ಶ್ರೀ ಕೋಟಿ ಚೆನ್ನಯ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್. ಸಿ ನಾರಾಯಣ ರೆಂಜ, ಪುತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಣಿಕಂಠ , ನಗರ ವಲಯ ಕಾರ್ಯದರ್ಶಿ ಶ್ರೀಧರ ನಾಯಕ್, ನಗರ ಮಂಡಲ ಆಧ್ಯಕ ಶಿವಕುಮಾರ್ ಪಿ. ಬಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜ್ರಿಮಾರು, ಬಡಗನ್ನೂರು ಗ್ರಾ. ಪಂ ಸದಸ್ಯ ಸಂತೋಷ ಆಳ್ವ ಗಿರಿಮನೆ, ನವರಾತ್ರಿ ಉತ್ಸವ ಸಮಿತಿ ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ ಮತ್ತಿತರರು ಉಪಸ್ಥಿತರಿದ್ದರು.