ಕೊಡಗು ಜಿಲ್ಲಾ ಪ್ರವಾಸಕ್ಕೆ ಭಕ್ತಕೋಡಿಯಲ್ಲಿ ಚಾಲನೆ
ಪುತ್ತೂರು: ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್ ಬಿ ಅವರ 65ನೇ ಹುಟ್ಟು ಹಬ್ಬ ಪ್ರಯುಕ್ತ ಅ.19ರಂದು ಕೊಡಗು ಜಿಲ್ಲೆಗೆ ಪ್ರವಾಸ ಆಯೋಜನೆ ಮಾಡಲಾಗಿದ್ದು ಪ್ರವಾಸಕ್ಕೆ ಭಕ್ತಕೋಡಿ ಜಂಕ್ಷನ್ ನಲ್ಲಿ ಚಾಲನೆ ನೀಡಲಾಯಿತು. ಕುಶಾಲನಗರದ ಪರಂಪರಾ ರೆಸಾರ್ಟ್ ನಲ್ಲಿ ಗುರು ಶಿಷ್ಯರ ಸಮ್ಮಿಲನ ನಡೆಯಲಿದ್ದು ಅಲ್ಲಿ ಇಬ್ಬರು ಸಾಧಕ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ.
ಪ್ರವಾಸ ತಂಡದಲ್ಲಿರುವ ಶ್ರೀನಿವಾಸ್ ಎಚ್ ಬಿ ಅವರ ಶಿಷ್ಯಂದಿರು ಹಾಗೂ ಅಭಿಮಾನಿಗಳು ಶ್ರೀನಿವಾಸ್ ಎಚ್ ಬಿ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಪ್ಲಾನ್ ಹಾಕಿಕೊಂಡಿದ್ದು ಅದರ ಜೊತೆಗೆ ಇನ್ನಿತರ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ತಿಳಿದು ಬಂದಿದೆ.