ಮುಂಡೂರು ಪ್ರಾ.ಕೃ.ಪ.ಸ.ಸಂಘದ 1 ಸ್ಥಾನಕ್ಕೆ ಚುನಾವಣೆ

0

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಮಿತಾ ಹಿಂದಾರು ಜಯಭೇರಿ

ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ಖಾಲಿಯಿರುವ ಸಾಲಗಾರ ಕ್ಷೇತ್ರದ ಮಹಿಳಾ ಮೀಸಲು ಸ್ಥಾನಕ್ಕೆ ಅ.19ರಂದು ಚುನಾವಣೆ ನಡೆದು ಸಂಜೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಮಿತಾ ಹಿಂದಾರು ಅವರು 599 ಮತಗಳನ್ನು ಪಡೆದು ಜಯಗಳಿಸಿದ್ದಾರೆ.


ಪ್ರತಿಸ್ಪರ್ಧಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ರೇವತಿ ಪಜಿಮಣ್ಣು ಅವರು 247 ಮತಗಳನ್ನು ಪಡೆದು ಪರಾಜಿತಗೊಂಡರು.

ಮುಂಡೂರು ಪ್ರಾ.ಕೃ.ಪ. ಸಹಕಾರ ಸಂಘದಲ್ಲಿ ಸಾಲಗಾರ ಕ್ಷೇತ್ರದ ಮಹಿಳಾ ಮೀಸಲು ಸ್ಥಾನದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದ ಗುಲಾಬಿ ಎನ್ ಶೆಟ್ಟಿಕಂಪ ಅವರು ಮೇ 14ರಂದು ನಿಧನ ಹೊಂದಿದ್ದು, ಅವರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ.

LEAVE A REPLY

Please enter your comment!
Please enter your name here