ಪುರುಷೋತ್ತಮ ಪ್ರಭುಗಳ ಆದರ್ಶ ಬದುಕು ಪ್ರೇರಣೆಯಾಗಬೇಕು- ಸಂಜೀವ ಕಲ್ಲೇಗ
ಪುತ್ತೂರು: ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಎಚ್ ಪುರುಷೋತ್ತಮ ಪ್ರಭುರವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್‍ಯಕ್ರಮ ಅ.19 ರಂದು ಪುತ್ತೂರು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಜರಗಿತು.

ಪುರುಷೋತ್ತಮ ಪ್ರಭುಗಳ ಆದರ್ಶ ಬದುಕು ಪ್ರೇರಣೆಯಾಗಬೇಕು- ಸಂಜೀವ ಕಲ್ಲೇಗ
ಕಲ್ಲೇಗ ರೂರಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ಕಲ್ಲೇಗರವರು ಮಾತನಾಡಿ 1998 ಸಂದರ್ಭ ಬಹಳ ಕಷ್ಟದ ಸಮಯವಾಗಿತ್ತು. ಆ ಸಮಯದಲ್ಲಿ ಕಶೆಕೋಡಿಯಲ್ಲಿ ಸಭಾಭವನ ನಿರ್ಮಾಣದಲ್ಲಿ ಒಂದು ಕೊಠಡಿಯ ಕೊಡುಗೆಯನ್ನು ನೀಡಿ, ನಮಗೆ ಪ್ರೋತ್ಸಾಹವನ್ನು ಮಾಡಿದವರು ಪುರುಷೋತ್ತಮ ಪ್ರಭುಗಳು, ಆ ಬಳಿಕ ಬೇರೆ ಬೇರೆ ಸಂದರ್ಭದಲ್ಲಿ ಅನೇಕ ಧನಸಹಾಯವನ್ನು ಮಾಡಿದ್ದಾರೆ. ಅವರಿಗೆ ನಮ್ಮ ಸಮಾಜದ ಬಗ್ಗೆ ಅತೀವ ಪ್ರೀತಿ ಇತ್ತು, ಆದರ ಜೊತೆಗೆ ಹಿಂದು ಸಮಾಜದ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದರು. ನಮ್ಮ ಮಕ್ಕಳಿಗೆ ಕುಟುಂಬದವರ ಬಗ್ಗೆ ತಿಳಿ ಹೇಳುವ ಕೆಲಸವನ್ನು ಮಾಡಬೇಕು, ಅಗ ಮಾತ್ರ ನಮ್ಮಲ್ಲಿ ಐಕ್ಯತೆಯ ಭಾವನೆಯು ಬೆಳೆಯುವುದು ಎಂದು ಹೇಳಿದ ಅವರು ಪುರುಷೋತ್ತಮ ಪ್ರಭುಗಳು ಸಾರ್ವಜನಿಕವಾಗಿ ಹೆಚ್ಚು ಜನರಿಗೆ ಪ್ರಯೋಜನವಾಗುವ ಕೆಲಸವನ್ನು ಮಾಡಿದ್ದಾರೆ. ಅವರ ಆದರ್ಶಗಳು ಬದುಕು ಪ್ರೇರಣೆಯಾಗಬೇಕು ಎಂದು ಹೇಳಿದರು.

ಸಮಾಜದ ಗೌರವಕ್ಕೆ ಪಾತ್ರರಾಗಿದ್ದರು- ನಿತ್ಯಾನಂದ ಭಟ್
ಅರ್ಚಕ ನಿತ್ಯಾನಂದ ಭಟ್ ಕಲ್ಲಡ್ಕರವರು ಮಾತನಾಡಿ ಪುರುಷೋತ್ತಮ ಪ್ರಭುಗಳು ಸತ್ಯ, ಧರ್ಮ, ನಿಷ್ಠೆಯಿಂದ ಜೀವನವನ್ನು ಸಾಗಿಸಿ, ಸಮಾಜದ ಗೌರವಕ್ಕೆ ಪಾತ್ರರಾಗಿದ್ದರು ಎಂದು ಹೇಳಿದರು.

ಪ್ರೀತಿ- ವಾತ್ಯಲವನ್ನು ಮರೆಯಲು ಸಾಧ್ಯವಿಲ್ಲ- ವೆಂಕಟ್ರಮಣ ಭಟ್
ನಿವೃತ್ತ ಶಿಕ್ಷಕ ವೆಂಕಟ್ರಮಣ ಭಟ್‌ರವರು ಮಾತನಾಡಿ ಪುರುಷೋತ್ತಮ ಪ್ರಭುಗಳು ಸ್ನೇಹಜೀವಿಯಾಗಿದ್ದರು, ನನಗೆ ಬಹಳಷ್ಟು ಸಹಕಾರವನ್ನು ನೀಡಿದ್ದಾರೆ, ಅವರ ಪ್ರೀತಿ- ವಾತ್ಯಲವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಹೊಸ ಶಕ್ತಿಯನ್ನು ನೀಡಿದೆ- ಅತ್ಮರಾಮ ಪಾಟೀಲ್
ಆತ್ಮರಾಮ ಪಾಟೀಲ್ ಮುಂಬೈರವರು ಮಾತನಾಡಿ ನನ್ನ ಭಾವ ಪುರುಷೋತ್ತಮ ಪ್ರಭುರವರು 80 ವರ್ಷಗಳ ಸಾರ್ಥಕ ಜೀವನ ಪಯಣದಲ್ಲಿ ಸಾಗಿ, ಇಂದು ನಮ್ಮನ್ನು ಅಗಲಿದ್ದಾರೆ. ಅವರ ಜೀವನದ ಸಾಧನೆ ನಮಗೆ ಹೊಸ ಶಕ್ತಿಯನ್ನು ನೀಡಿದೆ ಎಂದು ಹೇಳಿದರು. ಬಳಿಕ ಪುರುಷೋತ್ತಮ ಪ್ರಭುರವರ ಭಾವಚಿತ್ರಕ್ಕೆ ಪುಷ್ಪರ್ಚನೆಯನ್ನು ಮಾಡಲಾಯಿತು.
ಪುರುಷೋತ್ತಮ ಪ್ರಭುರವರ ಪತ್ನಿ ಎಚ್ ಪುಷ್ಪಲತಾ ಪ್ರಭು ಮತ್ತು ಮನೆಯವರು, ಕುಟುಂಬಸ್ಥರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ನಿತ್ಯನಿಧಿ ಸಂಗ್ರಾಹಕರು, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರುಗಳು, ಉದ್ಯಮಿಗಳು, ಊರ-ಪರವೂರ ಹಿತೈಷಿಗಳು ಸಮಾರಂಭದಲ್ಲಿ ಭಾಗವಹಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.