ಪುತ್ತೂರು: ನಗರಸಭೆ ವ್ಯಾಪ್ತಿಯ ಬೆದ್ರಾಳ ಸಮೀಪದ ನೆಲ್ಲಿಗೇರಿ ಎಂಬಲ್ಲಿ ಸಿಡಿಲು ಬಡಿದು ಮನೆಯಲ್ಲಿದ್ದ ಮಗು ಸಹಿತ ನಾಲ್ವರು ಅಸ್ವಸ್ತಗೊಂಡ ಮನೆಗೆ ಹಾನಿಯಾದ ಘಟನೆ ಅ.19ರಂದು ಸಂಜೆ ನಡೆದಿದೆ.
ಬೆದ್ರಾಳ ಸಮೀಪದ ನೆಲ್ಲಿಗೇರಿ ದಯಾನಂದ ಕುಲಾಲ್ ಅವರ ಹಂಚಿನ ಮನೆಗೆ ಸಿಡಿಲು ಬಡಿದಿದೆ. ಸಿಡಿಲಿನ ಆರ್ಭಟಕ್ಕೆ ಮನೆಗೆ ಹಾನಿಯಾಗಿದೆ.
ಈ ವೇಳೆ ಮನೆಯೊಳಗಿದ್ದ ದಯಾನಂದ ಅವರ 1 ವರ್ಷದ ಮಗು ಸಹಿತ ತಾಯಿ, ಪತ್ನಿ ಅಸ್ವಸ್ಥಗೊಂಡಿದ್ದಾರೆ.
ದಯಾನಂದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ ಅವರು ಭೇಟಿ ನೀಡಿದ್ದಾರೆ.