
ಪುತ್ತೂರು: ದ.ಕ ಜಿಲ್ಲೆ ಮಂಗಳೂರು ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಇವರು ಅ.19ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಸಿದ ದ.ಕ ಜಿಲ್ಲಾ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಕಡಬದ ಕುಂತೂರಿನ ಕೋಡ್ಲ ನಿವಾಸಿ ರವಿ ಪೂಜಾರಿ ಇವರು 100ಮೀ, 200ಮೀ, 400ಮೀ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಲಾಂಗ್ ಜಂಪ್ ನಲ್ಲಿ ದ್ವಿತೀಯ ಸ್ಥಾನ ಪಡೆದು, ಡಿಸೆಂಬರ್ 21,22ರಂದು ಕೋಲಾರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಬೆಳ್ಳಿಪ್ಪಾಡಿ, ಸ.ಹಿ.ಪ್ರಾ ಶಾಲೆ, ಶಾಂತಿನಗರ ಸ.ಪ್ರೌಢಶಾಲೆ ಹಾಗೂ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.