
ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ತೋಟತ್ತಡ್ಕ ಶಿರಾಡಿ ದೈವದ ಪ್ರತಿಷ್ಠಾ ಕಲಶ ತೋಟತ್ತಡ್ಕ ಬದ್ಯಾಮಾಡದಲ್ಲಿ ದ.5ರಂದು ಜರಗಲಿದೆ.
ದ.4ರಂದು ಸಂಜೆ ದೇವತಾ ಪ್ರಾರ್ಥನೆ, ದುರ್ಗಾಪೂಜೆ, ಸುಹಾಸಿನಿ ಆರಾಧನೆ. ಚತುರ್ಮೂರ್ತಿ ಆರಾಧನೆ, ಆಚಾರ್ಯವರಣ, ಸ್ಥಳಶುದ್ದಿ ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ಪ್ರಾಕಾರಬಲಿ, ಪ್ರಸಾದ ವಿತರಣೆ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ದ. 5ರಂದು ಬೆಳಿಗ್ಗೆ 6ರಿಂದ ಗಣಪತಿ ಹೋಮ, ಕಲಶಪೂಜೆ ಬೆಳಿಗ್ಗೆ ಗಂಟೆ 8.55ರ ಧನು ಲಗ್ನದಲ್ಲಿ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1.೦೦ಕ್ಕೆ: ಅನ್ನಸಂತರ್ಪಣೆ, ಸಂಜೆ ಗಂಟೆ 6.30ಕ್ಕೆ: ಪುಣ್ಚಪ್ಪಾಡಿ ದಂಡಿಮಾರು ಚಾವಡಿಯಿಂದ ಭಂಡಾರ ಬರುವುದು.
ರಾತ್ರಿ ಗಂಟೆ 8.30ಕ್ಕೆ ಅನ್ನಸಂತರ್ಪಣೆ
ದ.6ರಂದು ಬೆಳಿಗ್ಗೆ ಗಂಟೆ 8.30ಕ್ಕೆ ಶಿರಾಡಿ ದೈವದ ನೇಮ, ಮಧ್ಯಾಹ್ನ ಗಂಟೆ 1.೦೦ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪುಣ್ಚಪ್ಪಾಡಿ ತಳಮನೆ ಮತ್ತು ತೋಟತ್ತಡ್ಕ ಹಾಗೂ ಊರ ಹತ್ತು ಸಮಸ್ತರು ತಿಳಿಸಿದ್ದಾರೆ.