ಪುತ್ತೂರು: ಮುಂಡೂರು ಗ್ರಾಮದ ಕುರೆಮಜಲು ನಿವಾಸಿ ಪದ್ಮಪ್ಪ ಪೂಜಾರಿಯವರ ಪುತ್ರ ವಿಶ್ವನಾಥ ಪೂಜಾರಿಯವರು (57ವ.) ಅಲ್ಪಕಾಲದ ಆಸೌಖ್ಯದಿಂದ ಅ.21ರಂದು ನಿಧನರಾದರು.
ಮೃತರು ಕೃಷಿ ಮತ್ತು ಕೋಳಿ ಫಾರ್ಮ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಜಯಶ್ರೀ, ಪುತ್ರ ವಿಜೇತ್ ಕುರೆಮಜಲು, ಪುತ್ರಿ ಕುಮಾರಿ ಅನನ್ಯ, ಓರ್ವ ಸಹೋದರ, ಓರ್ವ ಸಹೋದರಿಯನ್ನು ಅಗಲಿದ್ದಾರೆ.
ಮೃತರ ಮನೆಗೆ ಪುತ್ತೂರು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಪುತ್ತೂರು ಮೂರ್ತೆದಾರರ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನರಿಮೊಗರು ಮೂರ್ತೆದಾರರ ಸಂಘದ ಮಾಜಿ ಅಧ್ಯಕ್ಷ ಅಣ್ಣಿ ಪೂಜಾರಿ ಹಿಂದಾರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ, ಗುರುಮಂದಿರದ ಮಾಜಿ ಕಾರ್ಯನಿರ್ವಾಹಣಾಧಿಕಾರಿ ಉದಯ ಕುಮಾರ್ ಕೋಲಾಡಿ, ಗುರುಮಂದಿರದ ಸದಸ್ಯ ಮಾಧವ ಸಾಲ್ಯಾನ್ ಶಿವಗಿರಿ, ಮಾಜಿ ಸದಸ್ಯರಾದ ಸಜ್ಜನ್ ಕುಮಾರ್ ಕಣ್ಣಾರ್ನೂಜಿ ಕುರೆಮಜಲ್, ಮುಂಡೂರು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಕುರೆಮಜಲು, ಮುಂಡೂರು ಗ್ರಾ.ಪಂ ಸದಸ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು, ಮಾಜಿ ಸದಸ್ಯೆ ಸಾವಿತ್ರಿ ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದರು.