ಕಡಬ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಜಿ ಹನೀಫ್ ಕೆ.ಎಂ. ಆಯ್ಕೆ

0

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮಾಲೇಶ್ವರ ವಾರ್ಡ್ ಸದಸ್ಯ ಹಾಜಿ ಹನೀಫ್ ಕೆ.ಎಂ. ಅವರು ಆಯ್ಕೆಯಾಗಿದ್ದಾರೆ. ಆಯ್ಕೆ ಸಭೆಯು ಕಡಬ ಪಟ್ಟಣ ಪಂಚಾಯತ್ ನಲ್ಲಿ ಅ.23ರಂದು ನಡೆಯಿತು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ತಮನ್ನಾ ಜಬೀನ್, ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಮುಖ್ಯಾಽಕಾರಿ ಲೀಲಾವತಿ, ಪ.ಪಂ. ಇಂಜಿನಿಯರ್ ಶಿವಕುಮಾರ್, ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್ ಹಾಗೂ ಸ್ಥಾಯಿ ಸಮಿತಿ ಸದಸ್ಯರಾದ ಸೈಮನ್ ಸಿ.ಜೆ. ಕೃಷ್ಣಪ್ಪ ಪೂಜಾರಿ, ರೋಹಿತ್ ಪಿ.ಜೆ, ಪೈಝಲ್, ಕೃಷ್ಣಪ್ಪ ನಾಯ್ಕ್, ಮೋಹನ್, ಪ.ಪಂ. ಸದಸ್ಯರಾದ ದಯಾನಂದ, ಅಕ್ಷತಾ, ಗುಣವತಿ, ಕುಸುಮಾ ಅವರು ಉಪಸ್ಥಿತರಿದ್ದರು.


ಕಡಬ ಅಡ್ಡಗದ್ದೆ ನಿವಾಸಿಯಾಗಿರುವ ಹನೀಫ್ ರವರು ಇತ್ತೀಚಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮಾಲೇಶ್ವರ ವಾರ್ಡ್‌ನಿಂದ ಸ್ಪಽಸಿ ಜಯಗಳಿಸಿದ್ದರು. ಇದೀಗ ಅವರಿಗೆ ಕಡಬ ಇವರು ಕಡಬ ಪಟ್ಟಣ ಪಂಚಾಯತ್‌ನ ಸ್ಥಾಯಿ ಸಮಿತಿ ಅಧ್ಯಕ್ಷತೆ ಒಲಿದಿದೆ. ಈ ಹಿಂದಿನ ಗ್ರಾಮ ಪಂಚಾಯತ್ ಆಡಳಿತದ ಸಮಯದಲ್ಲಿ ಸತತ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು. ಇವರ ಆಡಳಿತದ ಸಮಯದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದರು. ಇವರು ರಾಜಕೀಯ ಮಾತ್ರವಲ್ಲದೆ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here