ಆಲಂಕಾರು: ಆಲಂಕಾರು ಗ್ರಾಮದ ಬುಡೇರಿಯಾ, ಚಾಮೆತ್ತಡ್ಕ ಕಿರು ಸೇತುವೆಯ ಬಳಿ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದ್ದು, ಸರಿಪಡಿಸಲು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.ಆಲಂಕಾರು ಬುಡೇರಿಯಾ ಕ್ರಾಸ್ ನಿಂದ ಬುಡೇರಿಯಾ ಮೂಲಕ ಚಾಮೆತ್ತಡ್ಕದ ಮೂಲಕ ಆಲಂಕಾರು ಮತ್ತು ಕುಂತೂರು ಭಾಗವನ್ನು ಸಂಪರ್ಕಿಸುತ್ತಿದ್ದು ,ನಿತ್ಯ ನಿರಂತರ ಈ ಭಾಗದ ಶಾಲಾಮಕ್ಕಳು,ಗ್ರಾಮಸ್ಥರು ಈ ರಸ್ತೆಯನ್ನು ಅವಲಂಬಿಸಿರುತ್ತಾರೆ ಇದೀಗ ವಿಪರೀತ ಮಳೆಯ ಪ್ರಭಾವದಿಂದಾಗಿ ಬುಡೇರಿಯಾ ಮತ್ತು ಚಾಮೆತ್ತಡ್ಕ ಕಿರು ಸೇತುವೆಯ ಮೇಲೆ ನೀರು ಹರಿದ ಪರಿಣಾಮ ಸೇತುವೆ ಇಕ್ಕೇಲಗಳಲ್ಲಿನ ಮಣ್ಣು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಸೇತುವೆ ಇಕ್ಕೇಲಗಳಲ್ಲಿ ನೀರು ನುಗ್ಗಿ ರಸ್ತೆ ಸಂಪರ್ಕ ಕಡಿತಕೊಳ್ಳವ ಭೀತಿ ಎದುರಾಗಿದೆ.

ಆಲಂಕಾರು ಚಾಮೆತ್ತಡ್ಕ ಎಂಬಲ್ಲಿ ಕಿರು ಸೇತುವೆ ಕಾಮಗಾರಿ ನಡೆದು ಪಿಲ್ಲರ್ ಆಗಿ ಕೆಲಸ ಅರ್ಧಕ್ಕೆ ನಿಂತಿದ್ದು ಸೇತುವೆ ಸ್ಲಾಬ್ ಕೆಲಸ ಕಾರ್ಯ ನಡೆಯದೇ ಅರ್ಧದಲ್ಲಿ ನಿಂತಿದ್ದು ಗ್ರಾಮಸ್ಥರು ಆತಂಕದಲ್ಲಿ ಇದ್ದಾರೆ. ಈ ನಡುವೆ ವಿಪರೀತ ಮಳೆಯಿಂದಾಗಿ ಸೇತುವೆಗೆ ಸಂಪರ್ಕ ಮಾಡುವ ರಸ್ತೆಯು ಕಡಿತಗೊಳ್ಳುವ ಭೀತಿಯಿಂದ ಗ್ರಾಮಸ್ಥರು ಇನ್ನಷ್ಟು ಆತಂಕದಲ್ಲಿದ್ದಾರೆ ಎಂದು ಗ್ರಾಮಸ್ಥರು ಆಲಂಕಾರು ಗ್ರಾ.ಪಂ ಗೆ ಲಿಖಿತ ಮನವಿಯನ್ನು ನೀಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು, ಜನಪ್ರತಿನಿಧಿಗಳು ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಬುಡೇರಿಯಾ ಚಾಮೆತ್ತಡ್ಕದ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಆಲಂಕಾರು ಬುಡೇರಿಯಾ, ಚಾಮೆತ್ತಡ್ಕ ರಸ್ತೆಯು ಸಂಪರ್ಕ ರಸ್ತೆಯಾಗಿದ್ದು ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದೇ ರಸ್ತೆಯನ್ನು ಅವಲಂಬಿಸಿದ್ದೇವೆ.ರಸ್ತೆ ಲಘು ಮತ್ತು ಘನವಾಹನ ಸಂಚರಿಸಲು ಯೋಗ್ಯವಾಗಿಲ್ಲ. ಮಳೆಯಿಂದಾಗಿ ಸೇತುವೆ ಎರಡು ಕಡೆಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಇಲಾಖಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೇತುವೆ ಮತ್ತು ರಸ್ತೆಯನ್ನು ಸರಿಪಡಿಸಿಕೊಂಡುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದೇವೆ
ಶಕ್ತಿಪ್ರಸಾದ್ ಪಜ್ಜಡ್ಕ
ರಸ್ತೆಯ ಫಲಾನುಭವಿ
ಆಲಂಕಾರು ಬುಡೇರಿಯಾ ಚಾಮೆತ್ತಡ್ಕ ಸೇತುವೆಗೆ ಬಿ.ಜೆ .ಪಿ ಸರಕಾರ ಇದ್ದ ಸಂಧರ್ಭದಲ್ಲಿ ಮಾಜಿ ಸಚಿವರಾದ ಅಂಗಾರ ಎಸ್ ರವರ ಶಿಪಾರಸ್ಸಿನ ಮೆರೆಗೆ
95 ಲಕ್ಷ ರೂ ಅನುದಾನ ಬಿಡುಗಡೆಯಾಗಿತ್ತು.ಸದ್ರಿ ಕಾಮಗಾರಿಯನ್ನು ಕೆ.ಐ.ಆರ್.ಡಿ.ಎಲ್ ಸಂಸ್ಥೆಯ ಮೂಲಕ ಅನುಷ್ಟಾನ ಗೊಳಿಸಲಾಗಿತ್ತು. ಕಳೆದ ಒಂದು ವರ್ಷದ ಹಿಂದೆ ಪಿಲ್ಲರ್ ನ ಕಾಮಗಾರಿ ಮುಕ್ತಾಯಗೊಂಡಿದ್ದು, ಮೇಲಾಧಿಕಾರಿಗಳ ಬೇಜವಬ್ದಾರಿಯಿಂದ ಇಂಜಿನಿಯರ್ ಗಳು,ಗುತ್ತಿಗೆದಾರರಿಗೆ ಸ್ಲಬ್ ( ಮೇಲ್ಚಾವಣಿಯ) ಸ್ಟ್ರಕ್ಚರಲ್ ಡಿಸೈನ್ ಕೊಡದ ಕಾರಣ ಕಾಮಗಾರಿ ನಿಂತಿದೆ.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ರವರು ಸಂಬಂಧಪಟ್ಟ ಇಂಜಿನಿಯರ್ ರವರಿಗೆ ಇದೀಗಲೇ ಸ್ಟ್ರಕ್ಚರಲ್ ಡಿಸೈನ್ ನೀಡುವಂತೆ ಸೂಚನೆ ನೀಡಿದ್ದಾರೆ.
ಸೇತುವೆಯ ಕಾಮಗಾರಿ ಈ ಬೇಸಿಗೆಯಲ್ಲಿ ಕೊನೆಗೊಳ್ಳದಿದ್ದರೆ ಬುಡೇರಿಯಾ,ಚಾಮೆತ್ತಡ್ಕ ಭಾಗದ ಗ್ರಾಮಸ್ಥರನ್ನು ಸೇರಿಸಿಕೊಂಡು ಮಂಗಳೂರಿನ ಕೆ.ಐ.ಆರ್.ಡಿ.ಎಲ್ ಕಾರ್ಯಪಾಲಕ ಅಭಿಯಂತರ ಮುಂದೆ ಧರಣಿ ನಡೆಸಲಾಗುವುದು.
ಕೃಷ್ಣ ಶೆಟ್ಟಿ ಕಡಬ
ಮಾಜಿ ಜಿ.ಪಂ ಸದಸ್ಯರು ಕಡಬ.
ಬುಡೇರಿಯಾ ಮತ್ತು ಚಾಮೆತಡ್ಕದಲ್ಲಿ ಸೇತುವೆಯ ತಡೆಗೋಡೆ ವಿಪರೀತ ಮಳೆಯ ಕಾರಣ ಕುಸಿದು ಹೋಗಿ ಸಂಚಾರಕ್ಕೆ ಕಷ್ಟವಾಗಿದೆ ಇದು ಆಲಂಕಾರು ಕೊಂತ್ತೂರು ಸಂಪರ್ಕ ರಸ್ತೆಯಾಗಿದ್ದು, ಶಾಲಾ ಮಕ್ಕಳಿಗೂ ತುಂಬಾ ಕಷ್ಟವಾಗಿದೆ ಆದಷ್ಟು ಬೇಗ ಜನ ಪ್ರತಿನಿಧಿಗಳು,ಸಂಬಂಧಪಟ್ಟ ಗ್ರಾ.ಪಂ,ಇಲಾಖೆಯವರು ಸರಿಪಡಿಸಿ ಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ
ಹರೀಶ್ ಪೊಸೊನಿ, ರಸ್ತೆಯ ಫಲಾನುಭವಿ
ಆಲಂಕಾರು ಬುಡೇರಿಯಾ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗೂ ಶಿರಾಡಿ ದೇವಸ್ಥಾನದ ದೈವಗಳ ನೇಮೋತ್ಸವ ಪಜಡ್ಕ ಕಲ್ಕುಡ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದು ಚಾಮೆತ್ತಡ್ಕ ಮತ್ತು ಬುಡೇರಿಯಾ ಸೇತುವೆಯ ಮೂಲಕ ದೈವಗಳ ಭಂಡಾರ ಬರುತ್ತಿದ್ದು ಈ ರಸ್ತೆಯನ್ನು ಮತ್ತು ಸೇತುವೆಯನ್ನು ಗ್ರಾಮಸ್ಥರು, ಅಂಗನವಾಡಿ, ಶಾಲಾಮಕ್ಕಳು ಮತ್ತು ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಈ ರಸ್ತೆಯನ್ನು ಅವಲಂಬಿಸಿರುತ್ತಾರೆ.ಅದಷ್ಟು ಶೀಘ್ರ ಸೇತುವೆಯ ಕಾಮಗಾರಿ ಮತ್ತು ಸೇತುವೆಯ ತಡೆಗೋಡೆ ನಿರ್ಮಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ
ಅಶೋಕ ಪಜ್ಜಡ್ಕ ಆಲಂಕಾರು
ಕೃಷಿಕರು
ಗ್ರಾಮಸ್ಥರ ದೂರಿನಂತೆ ಅಲಂಕಾರು ಗ್ರಾಮದ ಬುಡೇರಿಯಾ ಮತ್ತು ಚಾಮೆತ್ತಡ್ಕ ಸೇತುವೆಯಲ್ಲಿಗೆ ಭೇಟಿ ನೀಡಿದ್ದೇವೆ ಇದೀಗಲೇ ಅನುದಾನಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇವೆ.
ಸುಜಾತ.ಕೆ
ಅಭಿವೃದ್ಧಿ ಅಧಿಕಾರಿ ಆಲಂಕಾರು ಗ್ರಾ.ಪಂ