ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸರ್ವೋದಯ ವಿದ್ಯಾಸಂಸ್ಥೆಗಳು ಸುಳ್ಯಪದವು ಇದರ ಸಹಯೋಗದಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟ-2025ದಲ್ಲಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿ ಈಶ್ವರಮಂಗಲ ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ತ್ವಿಷಾ ವಿ ಉದ್ದ ಜಿಗಿತದಲ್ಲಿ ಪ್ರಥಮ, 4×100ಮೀ ರಿಲೇ ತೃತೀಯ. ಪ್ರತೀತಿ 4×100ಮೀ ರಿಲೇ ತೃತೀಯ. ಲಿಶ್ಮ 4×100ಮೀ ರಿಲೇ ತೃತೀಯ. ಅರ್ಪಿತ 4×100ಮೀ ರಿಲೇ ತೃತೀಯ. ಬಾಲಕರ ವಿಭಾಗದಲ್ಲಿ ಶಾಮಿಲ್ 400ಮೀ ಓಟದಲ್ಲಿ ತೃತೀಯ.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸೃಷ್ಟಿ ಎಸ್ ಆರ್ ರೈ ತ್ರಿವಿಧ ಜಿಗಿತ ಪ್ರಥಮ, ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ಪ್ರಥಮ, 4×100ಮೀ ರಿಲೇ ಪ್ರಥಮ, 4×400ಮೀ ರಿಲೇ ಪ್ರಥಮ. ಅನಘ ಪಿ 400ಮೀ ದ್ವಿತೀಯ, 800ಮೀ ತೃತೀಯ, 1500ಮೀ ತೃತೀಯ, 4×100ಮೀ ರಿಲೇ ಪ್ರಥಮ, 4×400ಮೀ ರಿಲೇ ಪ್ರಥಮ.
ಧರಣಿ ಕೆ ಟಿ ಚಕ್ರ ಎಸೆತ ಪ್ರಥಮ. ಯಶ್ಮಿತ ಎತ್ತರ ಜಿಗಿತ ದ್ವಿತೀಯ. ಲಹರಿ ಎನ್ 4×100ಮೀ ರಿಲೇ ಪ್ರಥಮ, 4×400ಮೀ ರಿಲೇ ಪ್ರಥಮ. ವೀಕ್ಷಾ ಎ 4×100ಮೀ ರಿಲೇ ಪ್ರಥಮ, 4×400ಮೀ ರಿಲೇ ಪ್ರಥಮ. ಬಾಲಕರ ವಿಭಾಗದಲ್ಲಿ ಮೃದುಲ್ ಬಿ 400ಮೀ ಪ್ರಥಮ, 200ಮೀ ದ್ವಿತೀಯ, 4×100ಮೀ ರಿಲೇ ದ್ವಿತೀಯ, 4×400ಮೀ ರಿಲೇ ಪ್ರಥಮ. ಬಿ ಎಲ್ ಹಾರ್ದಿಕ್ ತ್ರಿವಿಧ ಜಿಗಿತ ಪ್ರಥಮ, 4×100ಮೀ ರಿಲೇ ದ್ವಿತೀಯ, 4×400ಮೀ ರಿಲೇ ಪ್ರಥಮ. ಧನ್ವಿತ್ ಶೆಟ್ಟಿ ಗುಂಡು ಎಸೆತ ತೃತೀಯ.
ಅಖಿಲ್ ಬಿ ಸಿ 4×400ಮೀ ರಿಲೇ ಪ್ರಥಮ. ಜ್ಞಾನೇಶ್ ಕೆ 4×100ಮೀ ರಿಲೇ ದ್ವಿತೀಯ. ಪ್ರಥಮ್ ಎಮ್ ಬಿ 4×100ಮೀ ರಿಲೇ ದ್ವಿತೀಯ. ಸಾನ್ವಿತ್ ರೈ 4×400ಮೀ ರಿಲೇ ಪ್ರಥಮ. 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸೃಷ್ಟಿ ಎಸ್ ಆರ್ ರೈ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಮತ್ತು ಈ ತಂಡವು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ರೈ ಹಾಗೂ ಹರ್ಷಿತ್ ಕೆ ತರಬೇತಿ ನೀಡಿರುತ್ತಾರೆ.