





ಕಾಣಿಯೂರು: ಕಲ್ಪಡ ಕೊಡಿಯಾಲ ಸ್ನೇಹಿತರ ಬಳಗದ ವತಿಯಿಂದ 9ನೇ ವರ್ಷದ ಗ್ರಾಮೀಣ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಅ 26ರಂದು ಕಲ್ಪಡ ಮೂವಪ್ಪೆಯಲ್ಲಿ ನಡೆಯಲಿದೆ.


ಬೆಳಿಗ್ಗೆ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಬೆಳಿಯಪ್ಪ ಗೌಡ ಕಲ್ಪಡ ಉದ್ಘಾಟಿಸಲಿದ್ದು, ಕೊಡಿಯಾಲ ಸ್ನೇಹಿತರ ಬಳಗದ ಅಧ್ಯಕ್ಷ ಸುರೇಶ್ ಕಲ್ಪಡಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ನೇಹಿತರ ಬಳಗದ ಗೌರವಾಧ್ಯಕ್ಷ ಶಿವರಾಮ ಉಪಾಧ್ಯಾಯ ಕಲ್ಪಡ ಮಾಲ್ಯತ್ತಾರು, ಕರಿಮಜಲು ಶ್ರೀ ಉಳ್ಳಾಕುಲು ದೈವಸ್ಥಾನ ಆಡಳಿತ ಮೊಕ್ತೇಸರ ಪುಟ್ಟಣ್ಣ ಗೌಡ ಪೈಕ, ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಸುಬ್ರಹ್ಮಣ್ಯ ಕೆ. ಎಂ., ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಕೊಡಿಯಾಲ ಒಕ್ಕೂಟದ ಪ್ರಸಾದ್ ಕೆ. ಕೆ, ಕಲ್ಪಡ, ಕೊಡಿಯಾಲ ಸೇವಾಪ್ರತಿನಿಧಿ, ಹರಿಣಿ ಕಲ್ಪಡ, ಮೂವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಶೇಷಪ್ಪ ಗೌಡ ಕಲ್ಪಡಗುತ್ತು, ಮೂವಪ್ಪೆ ಅಂಗನವಾಡಿ ಕಾರ್ಯಕರ್ತೆ ಗುಲಾಬಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನೆಯ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.





ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ನೇಹಿತರ ಬಳಗದ ಅಧ್ಯಕ್ಷ ಸುರೇಶ್ ಕಲ್ಪಡಗುತ್ತು ಅಧ್ಯಕ್ಷತೆ ವಹಿಸಲಿದ್ದು, ಕಾಣಿಯೂರು ಶ್ರೀ ಮಠದ ಮೆನೇಜರ್ ಶ್ರೀನಿಧಿ ಆಚಾರ್, ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕಿ ಹರಿಣಾಕ್ಷಿ ಕೆ. ಎಸ್, ಸುಳ್ಯ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದು, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ, ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಮಲೆಕೆರ್ಚಿ, ಕೆಲೆಂಬಿರಿ ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ರತನ್ ಕಾರ್ಲಡಿ, ಪುಣ್ಚತ್ತಾರು ಶ್ರೀಹರಿ ಭಜನಾ ಮಂಡಳಿ ಅಧ್ಯಕ್ಷ ಮಧುಕರ ಬೇಂಗಡ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ರಾಮಕೃಷ್ಣ ಮರಕ್ಕಡ ಇವರಿಗೆ ಸನ್ಮಾನ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹಿತರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.


 
            
