ವಾಹನದಿಂದ ಜಾನುವಾರು ಇಳಿಸಲು ಅರುಣ್ ಪುತ್ತಿಲ ಬರಬೇಕಿತ್ತಾ?,ಆರ್‌ಎಸ್‌ಎಸ್, ಸಂಘಪರಿವಾರದಿಂದ ಬಂದವರನ್ನು ಕಾಂಗ್ರೆಸ್‌ನಿಂದ ಹೊರಗೆ ಹಾಕಿ- ಅನ್ವರ್ ಸಾದಾತ್

0

ಪುತ್ತೂರು: ಈಶ್ವರಮಂಗಲದ ಬೆಳ್ಳಿಚಡವು ಎಂಬಲ್ಲಿ ಜಾನುವಾರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಒಬ್ಬರ ಕಾಲಿಗೆ ಪೊಲೀಸರು ನಡೆಸಿದ ಗುಂಡೇಟಿನ ಬಗ್ಗೆ ನಮಗೆ ಸಂಶಯ ಉಂಟಾಗಿದೆ.ಗುಂಡೇಟು ಮಾಡುವಂತಹ ಅಪರಾಧ ಅವನು ಮಾಡಿದ್ದಾನಾ? ಎಂದು ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಿರುವ ಎಸ್ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್,ಗುಂಡೇಟು ಮಾಡಿದ ಪ್ರಕರಣ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಇದರ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ಇಲ್ಲವೇ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.


ಜಾನುವಾರುಗಳನ್ನು ಹಾಸನ ಜಾನುವಾರು ಸಂತೆಯಿಂದ ಖರೀದಿಸಿ ಸಾಗಾಟ ಮಾಡಲಾಗುತ್ತಿತ್ತು.ವಾಹನವನ್ನು ಪೊಲೀಸರು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಹೋದಾಗ ವಾಹನವನ್ನು ಚೇಸ್ ಮಾಡಿ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ಓಡಿಹೋದಾಗ ಒಬ್ಬನಿಗೆ ಗುಂಡು ಹಾರಿಸಲಾಗಿದೆ.ಇನ್ನೊಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಕ್ರಮ ಜಾನುವಾರು ಸಾಗಾಟವಾಗಿದ್ದರೆ ಪೊಲೀಸರಿಗೆ ಬೇರೆ ಬೇರೆ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಅವಕಾಶಗಳಿವೆ.ಇವೆಲ್ಲವನ್ನು ಬಿಟ್ಟು ಕಾಲಿಗೆ ಗುಂಡು ಹಾಕಿ ಬಂಧಿಸುವಷ್ಟು ದೊಡ್ಡ ಅಪರಾಧ ಅವರು ಮಾಡಿದ್ದಾರೆಯೇ? ಆತ ಅಷ್ಟು ದೊಡ್ಡ ಅಪರಾಧಿಯೇ? ಎಂದು ಪ್ರಶ್ನಿಸಿದ ಅನ್ವರ್,ಪ್ರಕರಣದ ಬಗ್ಗೆ ಹಲವಾರು ಸಂಶಯ ಉಂಟಾಗುತ್ತಿದೆ.ಪೊಲೀಸ್ ವಾಹನಕ್ಕೆ ಡಿಕ್ಕಿ ಆಗಿದ್ದರೆ ಪೊಲೀಸ್ ವಾಹನ ಸಂಪೂರ್ಣ ಡ್ಯಾಮೇಜ್ ಆಗಬೇಕಿತ್ತು.ಆದರೆ ಅಂತಹ ದೊಡ್ಡ ಪ್ರಮಾಣದ ಡ್ಯಾಮೇಜ್ ಆಗಲಿಲ್ಲ.ತಪ್ಪಿಸಿಕೊಂಡು ಓಡಿ ಹೋಗುವವ ಹಿಂದೆ ಓಡಿ ಹೋಗುತ್ತಾನೆ ಆದರೆ ಇಲ್ಲಿ ಈಚರ್ ವಾಹನದ ಮುಂಭಾಗದಲ್ಲಿ ರಕ್ತದ ಕಲೆ ಇದೆ ಎಂದರಲ್ಲದೆ, ಘಟನೆ ಕುರಿತು ಪೊಲೀಸ್ ವರಿಷ್ಠಾಽಕಾರಿಯವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.


ವಾಹನದಿಂದ ಜಾನುವಾರು ಇಳಿಸಲು ಅರುಣ್ ಪುತ್ತಿಲ ಬರಬೇಕಿತ್ತಾ?:
ಘಟನೆ ಬೆಳಿಗ್ಗೆ 5.45ರಿಂದ 6 ಗಂಟೆಯ ಒಳಗೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಆದರೆ ಬೆಳಿಗ್ಗೆ 8 ಗಂಟೆಯವರೆಗೂ ಈಚರ್ ವಾಹನ ಅಲ್ಲಿತ್ತು.ಘಟನೆ ಆದ ಬಳಿಕ ಪುತ್ತೂರು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅಲ್ಲಿಗೆ ಬಂದು ಕೈಯಲ್ಲಿದ್ದ ಕತ್ತಿಯಿಂದ ವಾಹನದ ಟರ್ಪಾಲ್ ಬಿಚ್ಚಿಸುತ್ತಾರೆ.ಇದರ ಬಗ್ಗೆ ನಮಗೆ ಸಂಶಯ ವ್ಯಕ್ತವಾಗುತ್ತಿದೆ. ಆದರೆ, ಕೆಲವು ಘಟನೆಗಳು ನಡೆದಾಗ ಪೊಲೀಸರು ಸ್ಥಳೀಯರ ಸಹಕಾರವನ್ನು ಬಯಸುತ್ತೇವೆ.ಅರುಣ್ ಕುಮಾರ್ ಪುತ್ತಿಲ ಸ್ಥಳೀಯ ಮುಸಲ್ಮಾನರ ಮನೆಯಿಂದ ಕತ್ತಿ ತಂದು ಟರ್ಪಾಲ್ ಬಿಚ್ಚಿಸಿದ್ದಾರೆ ಎಂದು ಪೊಲೀಸರು ಡ್ಯಾಮೇಜ್ ಕಂಟ್ರೋಲ್ ಹೇಳಿಕೆ ನೀಡಿದ್ದಾರೆ.ಜಾನುವಾರು ಸಾಗಾಟದ ವಾಹನ ನಿಲ್ಲಿಸಿದ ಪೊಲೀಸರಿಗೇ ವಾಹನದಿಂದ ಜಾನುವಾರು ಇಳಿಸಲು ಆಗಿಲ್ಲವಾ?ಜಾನುವಾರುಗಳನ್ನು ಬೇಕಾದ ಕಡೆ ಕಳಿಸಲು ಪೊಲೀಸರಿಗೆ ಆಗಿಲ್ಲವಾ?ಇದಕ್ಕೆಲ್ಲಾ ಅರುಣ್ ಕುಮಾರ್ ಪುತ್ತಿಲ ಬೇಕಿತ್ತಾ?ಅವರ ಮೇಲೆ ಗಡಿಪಾರು ಆದೇಶವಿದೆ ಎಂದು ಹೇಳಿದ ಅನ್ವರ್ ಸಾದಾತ್,ದ.ಕ.ಜಿಲ್ಲೆಯಲ್ಲಿ ಇಂತಹ ಹಲವಾರು ಘಟನೆಗಳು ನಡೆದಾಗ ಪೊಲೀಸರು ಬಜರಂಗದಳದವರೊಂದಿಗೆ ಶಾಮೀಲಾದ ಬಗ್ಗೆ ಹಲವು ಉದಾಹರಣೆಗಳಿವೆ.ಇಲ್ಲಿ ಕೂಡ ಪೊಲೀಸರು ಶಾಮೀಲಾಗಿರುವ ಬಗ್ಗೆ ಸಂಶಯ ಬರುತ್ತಿದೆ ಎಂದು ಆರೋಪಿಸಿದರು.ಘಟನೆ ನಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಿತ ಪೋಸ್ಟ್ ಹಾಕಿದ ಅರುಣ್ ಕುಮಾರ್ ಪುತ್ತಿಲರ ಮೇಲೆ ಇನ್ನೊಂದು ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.


ಆರ್‌ಎಸ್‌ಎಸ್, ಸಂಘಪರಿವಾರದಿಂದ ಬಂದವರನ್ನು ಕಾಂಗ್ರೆಸ್‌ನಿಂದ ಹೊರಗೆ ಹಾಕಿ:
ಇಷ್ಟು ಘಟನೆಗಳಾದ ಮೇಲೆ ಮಧ್ಯಾಹ್ನ ಶಾಸಕ ಅಶೋಕ್ ಕುಮಾರ್ ರೈ ಘಟನಾ ಸ್ಥಳಕ್ಕೆ ಹೋಗಿದ್ದಾರೆ.ಬಳಿಕ ಅವರು ಹೇಳಿಕೆ ನೀಡಿ, ಮುಂದಿನ ದಿನಗಳಲ್ಲಿ ಕಾಲಿಗೆ ಬಿದ್ದ ಗುಂಡು ಬೇರೆ ಕಡೆ ಬೀಳಬಹುದು ಎಂದು ಹೇಳಿದ್ದಾರೆ.ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಶಾಸಕರು ಬಿಜೆಪಿ, ಸಂಘ ಪರಿವಾರದ ದ್ವೇಷ ಭಾಷಣಕಾರರು ಕೊಡುವಂತಹ ಹೇಳಿಕೆಗಳಿಂದಲೂ ತೀಕ್ಷ್ಣವಾದ ಹೇಳಿಕೆ ನೀಡಿದ್ದಾರೆ.ಯಾರನ್ನು ಸಂತೈಸಲು ಅವರು ಈ ಹೇಳಿಕೆ ನೀಡಿದ್ದಾರೆ?ರಾಜ್ಯದಲ್ಲಿ ಆಡಳಿತ ನಡೆಸುವ ಸರಕಾರದ ಪ್ರತಿನಿಽಯಾಗಿ ಇಂತಹ ಹೇಳಿಕೆ ನೀಡುವುದು ಸರಿಯಾ?ಇವರ ಹೇಳಿಕೆ ದ್ವೇಷ, ಹಲ್ಲೆಗೆ ಪ್ರಚೋದನೆ ನೀಡುವಂಥದ್ದಾಗಿದ್ದು ಪೊಲೀಸರಿಗೆ ಪ್ರೇರಣೆ, ಆದೇಶ ನೀಡುವಂತಾಗಿದೆ.ಘಟನೆ ನಡೆದಾಗ ತನಿಖೆ ಆಗಬೇಕು ಎಂದು ಹೇಳಬೇಕೇ ಹೊರತು ಅಲ್ಲಿ ಬಂದು ಬಿಲ್ಡಪ್ ಕೊಡಬಾರದು.ಆರ್‌ಎಸ್‌ಎಸ್, ಸಂಘ ಪರಿವಾರದಿಂದ ಬಂದಂತಹ ಇಂತಹ ವ್ಯಕ್ತಿಗಳನ್ನು ಕಾಂಗ್ರೆಸ್‌ನಿಂದ ಮೊದಲು ಹೊರಗೆ ಹಾಕಿ ಎಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯನವರಿಗೆ ಒತ್ತಾಯಿಸಿದರು.ಪ್ರಚೋದನೆ ಕೊಡುವಂತಹ ಹೇಳಿಕೆ ನೀಡಿದ ಶಾಸಕರ ಮೇಲೂ ಪೊಲೀಸರು ಸುಮೊಟೊ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.


ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಪುತ್ತೂರು, ಜಿಲ್ಲಾ ಸಮಿತಿ ಸದಸ್ಯ ಅಡ್ವೊಕೇಟ್ ಹಮೀದ್ ಕೆಮ್ಮಾರ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರ- ಬಾವು,ಕಾರ್ಯದರ್ಶಿ ರಹೀಮ್ ಪುತ್ತೂರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here