ಸವಣೂರು ವಲಯ ಮಟ್ಟದ ಕ್ರೀಡಾಕೂಟ : ಮುಂಡೂರು ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕೆಯ್ಯೂರು ಕೆಪಿಎಸ್ ಸ್ಕೂಲ್‌ನಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ತಶ್ರೀಫಾ ಅವರು ಉದ್ದ ಜಿಗಿತ ಹಾಗೂ 100 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಚಕ್ರ ಎಸೆತದಲ್ಲಿ ತೃಷಾ ಅವರು ಪ್ರಥಮ ಸ್ಥಾನ ಪಡೆದಿದ್ದು ಉದ್ದ ಜಿಗಿತದಲ್ಲಿ ಭವಿತ್ ಕೆ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವನಿತಾ ಬಿ ಇವರು ಶಾಲಾ ಶಿಕ್ಷಕ ವೃಂದದ ಸಹಕಾರದೊಂದಿಗೆ ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯ ಗುರು ವಿಜಯ ಪಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here