ನ. 2 : ಸುಳ್ಯದಲ್ಲಿ “ವ್ಯಾಸ” ಚಲನಚಿತ್ರಕ್ಕೆ ಕಲಾವಿದರ ಆಡಿಷನ್ ಪ್ರಕ್ರಿಯೆ

0

ಪುತ್ತೂರು: ಮಾನ್ಯ ಫಿಲಂಸ್ ನಿರ್ಮಾಣದಲ್ಲಿ ಅರೆಭಾಷೆ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರೀಕರಣಗೊಳ್ಳಲಿರುವ ಚಲನ ಚಿತ್ರ ” ವ್ಯಾಸ ” ಇದಕ್ಕೆ ಕಲಾವಿದರ ಆಡಿಷನ್ ಪ್ರಕ್ರಿಯೆ ನ. 2 ರಂದು ಸುಳ್ಯದ ಶಿವಕೃಪಾ ಕಲಾಮಂದಿರಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5:30 ರ ವರೆಗೆ ನಡೆಯಲಿದೆ. ಸಿನಿಮಾ ನಟನೆಯಲ್ಲಿ ಆಸಕ್ತಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚಿತ್ರತಂಡ ಕೇಳಿಕೊಂಡಿದೆ.

ವಯೋಮಿತಿ
ಬಾಲಕ ಬಾಲಕಿಯರಿಗೆ 10 ರಿಂದ 16 ವರ್ಷ. ಮಹಿಳಾ ಕಲಾವಿದರು 25 ರಿಂದ 55 ವರ್ಷ. ಪುರುಷ ಕಲಾವಿದರು 25 ರಿಂದ 65 ವರುಷ ವಯೋಮಿತಿಯಲ್ಲಿ ಇರಬೇಕು.

ಕಲಾವಿದರು ಅರೆಭಾಷೆ ಅಥವಾ ಕನ್ನಡ ಬಲ್ಲವರಾಗಿರಬೇಕು. ಇತ್ತೀಚಿನ ಭಾವಚಿತ್ರದೊಂದಿಗೆ ಆಡಿಷನ್ ನಲ್ಲಿ ಭಾಗವಹಿಸತಕ್ಕದ್ದು. ಸಹಾಯಕ ನಿರ್ದೇಶನ ಆಸಕ್ತಿ ಇರುವವರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 8217337667, 8088975452 ನಂಬರ್‌ ಅನ್ನು ಸಂಪರ್ಕಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here