ಚಾರ್ವಾಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ದೇಣಿಗೆ ಹಸ್ತಾಂತರ
ಕಾಣಿಯೂರು: ಬ್ರಹ್ಮ ಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಕೊರಿಯಾನ ಚಾರ್ವಾಕ ಇದರ ಜೀರ್ಣೋದ್ಧಾರದ ಕಾರ್ಯದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಾರ್ವಾಕ ಒಕ್ಕೂಟದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ರೂಪಾಯಿ ಹತ್ತು ಸಾವಿರ ದೇಣಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಗರಡಿಯ ಸೇವಾ ಟ್ರಸ್ಟಿನ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಟ್ರಸ್ಟಿನ ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ವರಮಹಾಲಕ್ಷ್ಮಿ ಪೂಜಾ ಸಮಿತಿ ಪದಾಧಿಕಾರಿಗಳಾದ ತೀರ್ಥಕುಮಾರಿ ದೇವರತ್ತಿಮಾರು, ಆನಂದ ಪೂಜಾರಿ ಗಾಳಿಬೆಟ್ಟು, ರಾಮಚಂದ್ರ ಗೌಡ ಇಡ್ಯಡ್ಕ, ಕುಸುಮಾಧರ ಎಣ್ಮೂರು, ಸೀತಾರಾಮ ಎಣ್ಮೂರು, ರಾಜೀವಿ ಬೊಮ್ಮೊಳಿಗೆ, ಜಿತೇಶ್ ದೇವರತ್ತಿಮಾರು ಉಪಸ್ಥಿತರಿದ್ದರು.
