ತಾಲೂಕು ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜು ಜಿಲ್ಲಾಮಟ್ಟಕ್ಕೆ ಆಯ್ಕೆ

0

ಸವಣೂರು: ಹೀರೆಬಂಡಾಡಿಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಗಳಿಸಿದ್ದಾರೆ.
ಮುಹಮ್ಮದ್ ಫಾಝಿಲ್ ದ್ವಿತೀಯ ಪಿಯುಸಿ (ಯಾಕೂಬ್ ಮತ್ತು ತಾಜುನ್ನಿಸ ಇವರ ಪುತ್ರ) ಗುಂಡೆಸೆತ ಮತ್ತು 800ಮೀ. ನಲ್ಲಿ ದ್ವಿತೀಯ ಮತ್ತು ಮಹಮ್ಮದ್ ಶಮ್ಮಾಸ್, ಪ್ರಥಮ ಪಿಯುಸಿ (ಹಸೈನಾರ್ ಪಿ. ಮತ್ತು ಮೈಮುನರವರ ಪುತ್ರ) 4೦೦ಮೀ.ನಲ್ಲಿ ದ್ವಿತೀಯ ಸ್ಥಾನಿಯಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಪ್ರಸಾದ್ ಆಳ್ವ ತರಬೇತಿ ನೀಡಿರುತ್ತಾರೆ. ಇವರನ್ನು ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈ, ಆಡಳಿತಾಧಿಕಾರಿ
ಅಶ್ವಿನ್ ಎಲ್. ಶೆಟ್ಟಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here