





ಅಧ್ಯಕ್ಷ- ಶೇಖರ ಮಿತ್ತಡ್ಕ , ಕಾರ್ಯದರ್ಶಿ – ಸನತ್ ಕುಮಾರ್ ರೈ ಕುಂಜಾಡಿ


ಬೆಟ್ಟಂಪಾಡಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಬೆಟ್ಟಂಪಾಡಿ ಗ್ರಾಮ ಸಮಿತಿಯ ಪ್ರಮುಖ್ ಗಳ ಆಯ್ಕೆ ಇತ್ತೀಚೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಆಯ್ಕೆ ಪ್ರಕ್ರಿಯೆಯನ್ನು ವಿಎಚ್ಪಿ ಪುತ್ತೂರು ಗ್ರಾಮಾಂತರ ಪ್ರಖಂಡದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಹಾಗೂ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಕೇಶವ ಪ್ರಸಾದ್ ರವರು ನಡೆಸಿಕೊಟ್ಟರು.






ಅಧ್ಯಕ್ಷರಾಗಿ ಶೇಖರ ಗೌಡ ಮಿತ್ತಡ್ಕ, ಕಾರ್ಯದರ್ಶಿಯಾಗಿ ಸನತ್ ಕುಮಾರ್ ರೈ ಕುಂಜಾಡಿ, ಸೇವಾ ಪ್ರಮುಖ್ ಸುಭಾಷ್ ಉಡ್ಡಂಗಳ, ಸತ್ಸಂಗ ಪ್ರಮುಖ್ ರಾಜೇಶ್ ನೆಲ್ಲಿತಡ್ಕ, ಗೋರಕ್ಷ ಪ್ರಮುಖ್ ಜಗದೀಶ್ ಪಾರ, ಪ್ರಚಾರ ಪ್ರಸಾರ ಪ್ರಮುಖ್ ಉಮೇಶ್ ಮಿತ್ತಡ್ಕ ರವರನ್ನು ಆಯ್ಕೆ ಮಾಡಲಾಯಿತು. ಬಜರಂಗದಳ ಸಂಯೋಜಕರಾಗಿ ಸಂತೋಷ್ ಉಡ್ಡಂಗಳ, ಗೋರಕ್ಷಾ ಪ್ರಮುಖ್ ಪುನೀತ್, ಸಾಪ್ತಾಹಿಕ ಮಿಲನ್ ಪ್ರಮುಖ್ ದೀಕ್ಷಿತ್ ಗುಡ್ಡೆ, ವಿದ್ಯಾರ್ಥಿ ಪ್ರಮುಖ್ ವಿನ್ಯಾಸ್ , ಸುರಕ್ಷಾ ಪ್ರಮುಖ್ ಗೌತಮ್, ಬಲೋಪಾಸನ ಪ್ರಮುಖ್ ಉಮೇಶ್ ಬಲ್ಲಾಳ್ ಆಯ್ಕೆಯಾದರು.





