ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ “ಸುಪ್ರಭ ಪ್ರೊಟೆಕ್ಟಿವ್ ಪ್ರೊಡಕ್ಟ್ಸ್ ಪ್ರೈವೆಟ್ ಲಿಮಿಟೆಡ್, ಪೂಣೆ ಇದರ ವತಿಯಿಂದ ಮೆಕ್ಯಾನಿಕಲ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಇಂಟರ್ವ್ಯೂ ಉದ್ಯೋಗ ನೇಮಕಾತಿ ನಡೆಸಲಾಯಿತು. ಇದರಲ್ಲಿ ಭಾಗವಹಿಸಿದ ಹಲವು ವಿದ್ಯಾರ್ಥಿಗಳಲ್ಲಿ ಸುಮಾರು 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಕಂಪನಿಯ ವ್ಯವಸ್ಥಾಪಕರಾದ ರಾಮಕಿರಣ್ ಎ.ಯಸ್ -HR ನಡೆಸಿಕೊಟ್ಟರು.
ಈ ಪ್ರಕ್ರಿಯೆಯಲ್ಲಿ ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿಯಾದ ಉಷಾ ಕಿರಣ ಯಸ್ ಯಮ್ ಹಿರಿಯ ಉಪನ್ಯಾಸಕಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗ, ಪ್ರಶಾಂತ್ ಹಿರಿಯ ಉಪನ್ಯಾಸಕರು ಮೆಕ್ಯಾನಿಕಲ್ ವಿಭಾಗ ಹಾಗೂ ಸಂಸ್ಥೆಯ ಉಪನ್ಯಾಸಕ ಉಪನ್ಯಾಸಕೇತರ ವರ್ಗದವರು ಸಹಕರಿಸಿದರು.
