ನಿತಿನ್ ವೈಯಕ್ತಿಕ ಚಾಂಪಿಯನ್
ಪುತ್ತೂರು : ಸರ್ವೋದಯ ಸುಳ್ಯ ಪದವು ಇಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟ ದ ಕ್ರೀಡಾ ಕೂಟದಲ್ಲಿ ಸರಕಾರಿ ಪ್ರೌಢಶಾಲೆ ಮಣಿಕ್ಕರ ದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.

10 ನೇ ತರಗತಿಯ ನಿತಿನ್ 3000ಮೀ, 1500ಮೀ ಹಾಗೂ 800ಮೀ ಓಟದಲ್ಲಿ ಪ್ರಥಮ ಸ್ಥಾನ ದೊಂದಿಗೆ ವೈಯಕ್ತಿಕ ಚಾಂಪಿಯನ್ ,10 ನೇ ತರಗತಿಯ ಸಂಗೀತಾ
1500ಮೀ ಮತ್ತು 3000 ಮೀ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 800 ಮೀ ಓಟದಲ್ಲಿ ದ್ವಿತೀಯ ಸ್ಥಾನ ,9ನೇ ತರಗತಿಯ ಅನುಷ್ ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನ
8 ನೇ ತರಗತಿಯ ಅಕ್ಷತಾ ಪಿ 600 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
.
ವಿದ್ಯಾರ್ಥಿಗಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಕರುಣಾಕರ ಮಣಿಯಾಣಿ ಅವರು ತರಬೇತು ನೀಡಿದ್ದಾರೆ.