





ರಾಮಕುಂಜ: ಕ್ರೀಡಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ನೂಜಿಬಾಳ್ತಿಲ ಹಾಗೂ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ ಇವರ ಆಶ್ರಯದಲ್ಲಿ ಅ.23 ಮತ್ತು 24ರಂದು ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ.ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕಡಬ ವಲಯ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.



14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಶಾಲೆಗೆ ತೃತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಕಿರಣ್ ಹಾಗೂ ಆಕಾಶ್ ಗೌಡ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಮೋಕ್ಷಿತ್ ಆರ್ ಗೌಡ-ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ದ್ವಿತೀಯ, ಧನುಷ್ ಪಿ-1೦೦ ಮೀ.ದ್ವಿತೀಯ, 2೦೦ ಮೀ.ದ್ವಿತೀಯ. ಯಶಸ್ ವೈ ಜೆ-ಗುಂಡು ಎಸೆತ ದ್ವಿತೀಯ, ಚಕ್ರ ಎಸೆತ ದ್ವಿತೀಯ, ಚಿನ್ಮಯಿ ಗೌಡ-ಗುಂಡು ಎಸೆತ ಪ್ರಥಮ, ಗುಣವಂತ್ ಗೌಡ-ಚಕ್ರ ಎಸೆತ ತೃತೀಯ, ತನುಷ್ ಬಿ. ಎಮ್.-ಎತ್ತರ ಜಿಗಿತ ತೃತೀಯ, ತೇಜಸ್ವಿ-6೦೦ ಮೀ.ತೃತೀಯ, 4/1೦೦ ಮೀಟರ್ ರಿಲೇ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಭುವನ ಎನ್.-ಉದ್ದ ಜಿಗಿತ ದ್ವಿತೀಯ, ಎತ್ತರ ಜಿಗಿತ ದ್ವಿತೀಯ, ಲಿಶಾ ಪಿ-100 ಮೀ.ದ್ವಿತೀಯ, ಅಭಿಜ್ಞಾ-6೦೦ ಮೀ.ತೃತೀಯ, 4/1೦೦ ಮೀ ರಿಲೇ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.





17ರ ವಯೋಮಾನದ ಬಾಲಕರ ವಿಭಾಗದಲ್ಲಿ ಕಿರಣ್-ಜಾವೆಲಿನ್ ತ್ರೋ ಪ್ರಥಮ, ಗುಂಡು ಎಸೆತ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಆಕಾಶ್ ಗೌಡ-8೦೦ ಮೀ.ಪ್ರಥಮ, 15೦೦ ಮೀ. ಪ್ರಥಮ, 3೦೦೦ ಮೀ.ಪ್ರಥಮ, ಶೌರ್ಯ ಕೆ ದಿನೇಶ್-2೦೦ ಮೀ.ಪ್ರಥಮ,4೦೦ ಮೀ.ಪ್ರಥಮ, ಭೌತಿಕ್ ಎಸ್.-1೦೦ ಮೀ.ದ್ವಿತೀಯ, 2೦೦ ಮೀ.ದ್ವಿತೀಯ, ಗಗನ್ ಎಂ.-ಉದ್ದ ಜಿಗಿತ ಪ್ರಥಮ, ಕಿಶೋರ್ ಡಿ.ಕೆ.-ತ್ರಿವಿಧ ಜಿಗಿತ ದ್ವಿತೀಯ, ಯಶವಂತ್ ಎಸ್.ವಿ.-ಗುಂಡು ಎಸೆತ ದ್ವಿತೀಯ, ರೋಹನ್ ಎಸ್. ಗೌಡ-1,5೦೦ ಮೀ.ತೃತೀಯ, 4/1೦೦ ಮೀ.ರಿಲೇ ಪ್ರಥಮ, 4/4೦೦ ಮೀಟರ್ ರಿಲೇ ಪ್ರಥಮ ಹಾಗೂ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಶರ್ವರಿ ಕೆ.ರೈ-ಚಕ್ರ ಎಸೆತ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.



