






ಪುತ್ತೂರು: ಇಲ್ಲಿನ ಕಲ್ಲಾರೆ ಕೃಷ್ಣಾ ಆರ್ಕೇಡ್ನಲ್ಲಿ ವ್ಯವಹರಿಸುತ್ತಿರುವ ಶ್ರೀ ಮಹಾಲಿಂಗೇಶ್ವರ ಗ್ಲಾಸ್ & ಫ್ಲೈವುಡ್ಸ್ 14ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದ ಪ್ರಯುಕ್ತ ಸಂಸ್ಥೆಯಲ್ಲಿ ಅ.30 ರಂದು ಗಣಹೋಮ ಹಾಗೂ ಲಕ್ಷ್ಮೀ ಪೂಜೆ ನಡೆಯಿತು.



ಅರ್ಚಕ ವೇ. ಮೂ. ಸಂದೀಪ ಕಾರಂತ ಕಾರ್ಪಾಡಿ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಮಾಲಕ ಯನ್.ಜಗನ್ನಾಥ ಗೌಡ ನಿಡ್ಯಾಳಗುತ್ತು, ಸಂಸ್ಥೆಯ ಬೆಳವಣಿಗೆಗೆ ಗ್ರಾಹಕರ ಪ್ರೋತ್ಸಾಹವೇ ಕಾರಣ. ಮುಂದೆಯೂ ಇದೇ ರೀತಿ ಸಹಕಾರವನ್ನು ಕೋರುತ್ತೇವೆ ಎಂದರು.
ಪತ್ನಿ ಪ್ರತಿಭಾ ಜಗನ್ನಾಥ ಗೌಡ ಅವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಈ ವೇಳೆ ಗ್ರಾಹಕರು, ಹಿತೈಷಿಗಳು, ಬಂಧು ಮಿತ್ರರು ಉಪಸ್ಥಿತರಿದ್ದರು.














