ನೆಲ್ಯಾಡಿ: ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಜ್ಯೋತಿ 800 ಮೀ- ಪ್ರಥಮ, 400 ಮೀ. ಪ್ರಥಮ, 4/100 ಮೀ. ರಿಲೇ-ದ್ವಿತೀಯ, 4/400 ಮೀ. ರಿಲೇ-ದ್ವಿತೀಯ, ಭುವನ್ಎತ್ತರ ಜಿಗಿತ -ಪ್ರಥಮ, 4/100 ರಿಲೇ- ದ್ವಿತೀಯ, ಮನ್ವೀತ್ 800 ಮೀ- ದ್ವಿತೀಯ, 1500 ಮೀ-ದ್ವಿತೀಯ, 4/100 ಮೀ. ರಿಲೇ -ದ್ವಿತೀಯ, ಅಕ್ಷಿಣಿ 100 ಮೀ. ದ್ವಿತೀಯ, 4/100 ಮೀ. ರಿಲೇ-ದ್ವಿತೀಯ, ಪ್ರಣೀತಾ 4/400ಮೀ ರಿಲೇ -ದ್ವಿತೀಯ, 4/100 ಮೀ ರಿಲೇ -ದ್ವಿತೀಯ, ಸಮೃದ್ಧ್ 4/100 ರಿಲೇ -ದ್ವಿತೀಯ, 4/400 ರಿಲೇ -ದ್ವಿತೀಯ, ಅಕ್ಷಿತಾ 4/400ಮೀ ರಿಲೇ -ದ್ವಿತೀಯ,
ಲಿಕೇಶ್ 4/100 ಮೀ ರಿಲೇ -ದ್ವಿತೀಯ, ಧನುಷ್ 4/100 ರಿಲೇ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್, ಸಹ ಸಂಚಾಲಕರಾದ ಡೀಕನ್ ಜಾರ್ಜ್ ಕೆ.ಎಂ., ಮುಖ್ಯಗುರು ಶ್ರೀಧರ ಗೌಡ ಹಾಗೂ ಶಿಕ್ಷಕರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್ ರೈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.
