ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಪಾರ ನಿವಾಸಿ ಸುಬ್ರಹ್ಮಣ್ಯ ಭಟ್‌ರವರ ಪುತ್ರ ಪ್ರೀತಂ ಭಟ್(40ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನ.3ರಂದು ನಿಧನರಾಗಿದ್ದಾರೆ. ಮೃತರು ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಮನೋರಮಾ ಎಸ್. ಭಟ್, ಪತ್ನಿ ಸ್ವಾತಿ, ಪುತ್ರ ಸುತೇಜ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಅಂತಿಮ ದರ್ಶನ: ಮೃತರ ತಂದೆಯ ಮಾಲಕತ್ವದಲ್ಲಿ ಬೆಟ್ಟಂಪಾಡಿ ರೆಂಜದಲ್ಲಿರುವ ಕಾಂಪ್ಲೆಕ್ಸ್ ಸಮೀಪ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಿಜೆಪಿ ಮುಖಂಡರಾದ ಅರ್.ಸಿ ನಾರಾಯಣ ರೆಂಜ, ಡಿ.ಶಂಭು ಭಟ್, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ರಾಮಯ್ಯ ರೈ, ಕರುಣಾಕರ ಶೆಟ್ಟಿ ಕೊಮ್ಮಂಡ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಮೊಯಿದು ಕುಂಞ, ವರ್ತಕರಾದ ಮಾಧವ ಪೂಜಾರಿ ಸಏರಿದಂತೆ ಹಲವರು ಅಂತಿಮ ದರ್ಶನ ಪಡೆದರು.