ಪುತ್ತೂರು: ದೀಪಾವಳಿ ಮತ್ತು ತುಳಸಿ ಪೂಜೆ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನೆಲ್ಲಿಕಟ್ಟೆಯ ಸಮಾನಮನಸ್ಕರು ಸೇರಿಕೊಂಡು ಆಯೋಜಿಸಿದ ನೆಲ್ಲಿಕಟ್ಟೆ ಕ್ರ್ಯಾಕರ್ಸ್ ಪಟಾಕಿ ಮೇಳದಲ್ಲಿ 1 ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿ ಮತ್ತು 8 ವಿಶೇಷ ಗಿಫ್ಟ್ ಬಾಕ್ಸ್ಗಳ ಲಕ್ಕಿ ಕೂಪನ್ ಡ್ರಾ ಅನ್ನು ನ.3ರಂದು ರಾತ್ರಿ ಪಟಾಕಿ ಮೇಳದಲ್ಲಿ ನಡೆಸಲಾಯಿತು.
ರೂ. 2ಸಾವಿರ ಪಟಾಕಿ ಖರೀದಿಯಲ್ಲಿ ಲಕ್ಕಿ ಕೂಪನ್ ನೀಡಲಾಗುತ್ತಿತ್ತು. ಉದ್ಯಮಿ ಹನುಮಾನ್ ಏಜೆನ್ಸಿಯ ದಿನೇಶ್ ಮೊಡಪ್ಪಾಡಿಮೂಲೆ ಅವರು ಲಕ್ಕಿ ಡ್ರಾ ನಡೆಸಿಕೊಟ್ಟರು. ಈ ಸಂದರ್ಭ ನೆಲ್ಲಿಕಟ್ಟೆ ಕ್ರ್ಯಾಕರ್ಸ್ನ ನೇತೃತ್ವ ವಹಿಸಿಕೊಂಡ ಜಗದೀಶ್, ತೇಜಸ್, ಅಭಿಲಾಶ್, ಅಭಿಜೀತ್, ಮುಕೇಶ್, ರಕ್ಷಿತ್, ಆರೀಫ್, ಪವಿತ್ರ ಮತ್ತಿತರರು ಉಪಸ್ಥಿತರಿದ್ದರು. ವಿಜೇತರು ವಾರದೊಳಗೆ ತಮ್ಮ ಬಹುಮಾನ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.
