





ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆಯ ಲಕ್ಷ ದೀಪೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಜರಗಿತು.


ಲಕ್ಷ ದೀಪೋತ್ಸವದಂಗವಾಗಿ ರಾತ್ರಿ ವನಭೋಜನದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಭಜನಾ ಸೇವೆ, ದೀಪ ನಮಸ್ಕಾರ, ಮಂಗಳಾರತಿ ಬಳಿಕ ಶ್ರೀ ದೇವರ ಬೆಳ್ಳಿ ಪಲ್ಲಕ್ಕಿಯಲ್ಲಿ ಪೇಟೆ ಉತ್ಸವ ನಡೆಯಿತು. ಧಾರ್ಮಿಕ ವಿಧಿವಿಧಾನವನ್ನು ದೇವಾಲಯದ ತಂತ್ರಿಗಳಾದ ಪಿ. ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕರಾದ ರವೀಂದ್ರ ಭಟ್ ಹಾಗೂ ಸಂದೀಪ್ ಭಟ್ ನಡೆಸಿಕೊಟ್ಟರು. ಈ ಸಂದರ್ಭ ಸತತ ನಾಲ್ಕು ಗಂಟೆಗಳ ಕಾಲ ಆಕರ್ಷಕ ಸುಡುಮದ್ದುಗಳ ಪ್ರದರ್ಶನವೂ ನಡೆಯಿತು.





ಕಾರ್ಯಕ್ರಮದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು. ನಾಗರಾಜ ಭಟ್, ಡಾ. ಎಂ.ಆರ್.ಶೆಣೈ, ಕೆ.ಅನಂತರಾಯ ಕಿಣಿ, ಪಿ.ದೇವಿದಾಸ ಭಟ್ ಪ್ರಮುಖರಾದ ಉಜಿರೆ ಪ್ರಭಾತ್ ಭಟ್, ಕರಾಯ ಗಣೇಶ ನಾಯಕ್, ಸತೀಶ ನಾಯಕ್, ಎಂ. ಶ್ರೀನಿವಾಸ ಭಟ್ ಲಕ್ಷ್ಮೀನಗರ, ಕೆ. ಸುರೇಶ ಕಿಣಿ, ಎಚ್. ರಾಘವೇಂದ್ರ ಪ್ರಭು, ಪಣಕಜೆ ದಿನೇಶ ಶೆಣೈ, ವಿದ್ಯಾಧರ ಮಲ್ಯ, ಎಚ್. ವಿನಾಯಕ ಪ್ರಭು, ನೀನಿ ಸಂತೋಷ ಕಾಮತ್, ಕೆ. ರಾಮ ಪೈ, ಎಂ. ಸತ್ಯಪ್ರಸಾದ್ ಭಟ್ ಲಕ್ಷ್ಮೀನಗರ, ಕೆ. ಗಿರೀಶ ನಾಯಕ್, ಕೆ.ದಾಮೋದರ ಪ್ರಭು, ಕೆ.ರವೀಂದ್ರ ಪೈ, ಕೆ.ಗೋಕುಲ್ದಾಸ್ ಭಟ್, ಎಸ್. ಮಂಜುನಾಥ ಭಟ್, ಬಿ. ಚೇತನ ಶೆಣೈ, ಕರಾಯ ನಾಗೇಶ ನಾಯಕ್, ವೈ. ಅನಂತ ಶೆಣೈ , ಕೆ.ರಾಘವೇಂದ್ರ ನಾಯಕ್, ಎನ್. ನಂದಾವರ ಯೋಗೀಶ್ ಶೆಣೈ, ಯು. ರಾಜೇಶ ಪೈ, ಕೆ.ಪದ್ಮನಾಭ ಕಾಮತ್, ಕೇದರನಾಥ ಶೆಣೈ ಉಪಸ್ಥಿತರಿದ್ದರು. ದೇವಾಲಯದ ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು ಹಾಗೂ ಎ. ಮಂಜುನಾಥ ನಾಯಕ್ ಸಹಕರಿಸಿದರು.










