ಪುತ್ತೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 2025-26ನೇ ಸಾಲಿನಲ್ಲಿ ಶೇಕಡಾ 50ರ ಸಹಾಯಧನದಲ್ಲಿ ಹೈನುಗಾರರಿಗೆ ತಲಾ ಎರಡು ರಬ್ಬರ್ ನೆಲಹಾಸು ವಿತರಿಸಲಾಗುತ್ತಿದ್ದು ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ ಪರಿಶಿಷ್ಟ ಜಾತಿಗೆ -3, ಪರಿಶಿಷ, ಪಂಗಡಕ್ಕೆ-2, ಅಲ್ಪಸಂಖ್ಯಾತರಿಗೆ-2, ವಿಕಲಚೇತನರಿಗೆ-2 ಹಾಗೂ ಇತರ ವರ್ಗದವರಿಗೆ-9ರಂತೆ ಒಟ್ಟು 18
ಹೈನುಗಾರರಿಗೆ ತಲಾ ಎರಡು ರಬ್ಬರ್ ನೆಲಹಾಸುಗಳನ್ನು ಶೇಕಡಾ 50ರ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಎರಡು ಮ್ಯಾಟ್ ಗಳಿಗೆ ರೂ.5,698 ದರವಿದ್ದು ಫಲಾನುಭವಿಗಳು ಒಟ್ಟು ಮೊತ್ತದ ಶೇ.50ರಷ್ಟು ಅಂದರೆ ಎರಡು ಮ್ಯಾಟ್ ಗೆ ರೂ.284ನ್ನು ಪಾವತಿಸಬೇಕಾಗಿರುತ್ತದೆ.
ಅರ್ಜಿಯೊಂದಿಗೆ ಹೈನುಗಾರರ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸುವುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಆರ್ಡಿ ಸಂಖ್ಯೆ ಇರುವ ಜಾತಿ ಪ್ರಮಾಣಪತ್ರ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ನ.11 ಕಡೇ ದಿನಾಂಕವಾಗಿರುತ್ತದೆ. ಆಸಕ್ತ ಹೈನುಗಾರರು ಹತ್ತಿರದ ಪಶುಪಾಲನಾ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸುವಂತೆ ಪುತ್ತೂರು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಡಾ| ಧರ್ಮಪಾಲ್ ಕೆ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
