ಒಂದೂವರೆ ದಶಕದ ಹಿಂದೆ ಮನಸ್ಸಿನಲ್ಲಿ ನೂರಾರು ಕನಸುಗಳನ್ನು ಬಿತ್ತಿತ್ತು ಈ ಜಾಗ
ಕನಸಿನ ಗಿಡ ಬೆಳೆದು ಹೆಮ್ಮರವಾಗಿ ಅದೇ ಜಾಗಕ್ಕೆ ನೆರಳು ನೀಡಲು ಬಂದಿದೆ ಈಗ..!!
ಇದು ಇಂದು ಪುಸ್ತಕ ಮತ್ತು ಶೈಕ್ಷಣಿಕ ಸಾಮಾಗ್ರಿ (ಬುಕ್ಸ್ ಸ್ಟೇಷನರಿ)ಗಳ ಕ್ಷೇತ್ರದಲ್ಲಿ ತನ್ನದೇ ಆದ ಬ್ರ್ಯಾಂಡ್ನ್ನು ಕ್ರಿಯೇಟ್ ಮಾಡಿ ಮುನ್ನುಗ್ಗುತ್ತಿರುವ ‘ಎಸ್ಎಲ್ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.’ ಎನ್ನುವ ಸಂಸ್ಥೆಯ ಆಡಳಿತ ನಿರ್ದೇಶಕ ದಿವಾಕರ ದಾಸ್ ನೇರ್ಲಾಜೆ ಎನ್ನುವ ಯಶಸ್ವಿ ಉದ್ಯಮಿ, ಕೊಡುಗೈದಾನಿಯ ಸಾಹಸಗಾಥೆ. 1997ರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿ ಹೊರಬಂದಿದ್ದ ದಿವಾಕರದಾಸ್ ನೇರ್ಲಾಜೆ ಎನ್ನುವ ಅದಮ್ಯ ಕನಸಿನ ಹುಡುಗ ಇಂದು ‘ಎಸ್ಎಲ್ವಿ ಗ್ರೂಪ್’ ಎನ್ನುವ ಬೃಹತ್ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ತನ್ನ ಹುಟ್ಟೂರಿಗೊಂದು ಕೊಡುಗೆ ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಇದೀಗ ಪುತ್ತೂರಿನ ನೆಹರೂನಗರದಲ್ಲಿ ‘ಎಸ್ಎಲ್ವಿ ಬುಕ್ ಹೌಸ್’ನ ಮತ್ತೊಂದು ಮಳಿಗೆಯನ್ನು ಆರಂಭಿಸುತ್ತಿದ್ದಾರೆ. 2025ರ ನವೆಂಬರ್ 15ರಂದು ವಿಭಿನ್ನವಾದ, ವಿಸ್ತಾರವಾದ, ಗ್ರಾಹಕರಿಗೆ ಹೊಸ ಅನುಭವವನ್ನು ಒದಗಿಸಬಲ್ಲ ಸಂಪೂರ್ಣ ಹವಾನಿಯಂತ್ರಿತ ‘ಎಸ್ಎಲ್ವಿ ಬುಕ್ ಹೌಸ್’ನ ಮಳಿಗೆ ನೆಹರೂನಗರದ ಕಾಲೇಜ್ ಗೇಟ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಳ್ಳುತ್ತಿದೆ.
ದೇಶದ ಭವಿಷ್ಯ ನಿಂತಿರುವುದು ಶಿಕ್ಷಣದ ಮೇಲೆ. ವಿದ್ಯಾಸಂಸ್ಥೆಗಳು, ಶಿಕ್ಷಕರ ಜೊತೆಗೆ ಶಿಕ್ಷಣಕ್ಕೆ ಪೂರಕವಾಗಿ ಸ್ಟೇಷನರಿ ವಸ್ತುಗಳು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಳಸುವ ಪೆನ್ಸಿಲ್, ಪೆನ್, ನೋಟ್ಬುಕ್ ಮತ್ತು ಪಠ್ಯಪುಸ್ತಕಗಳಂತಹ ಮೂಲಭೂತ ಸ್ಟೇಷನರಿ ಸಾಮಗ್ರಿಗಳು ಜ್ಞಾನಾರ್ಜನೆ ಮತ್ತು ಕಲಿಕೆಯ ಅಡಿಪಾಯ. ಉತ್ತಮ ಗುಣಮಟ್ಟದ ಸ್ಟೇಷನರಿಗಳ ಲಭ್ಯತೆಯು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಇದು ಭವಿಷ್ಯದ ವಿಜ್ಞಾನಿಗಳು, ಶಿಕ್ಷಕರು, ತಂತ್ರಜ್ಞರ ಮತ್ತು ನಾಯಕರ ಉಗಮಕ್ಕೆ ಮೂಲಪ್ರೇರಣೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳ ನಡುವೆ ವ್ಯಾವಹಾರಿಕ ಪೈಪೋಟಿ ಇರುವ ಇಂತಹ ಬುಕ್ಸ್ ಸ್ಟೇಷನರಿ ವಿಭಾಗದಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸುವುದು ಸುಲಭದ ಮಾತಲ್ಲ. ಆದರೆ ಕಳೆದ 16 ವರ್ಷಗಳ ಹಿಂದೆ ರೂಪುಗೊಂಡು ಇಂದು ರಾಜ್ಯವ್ಯಾಪಿಯಾಗಿ ಬೆಳೆದು, ಗ್ರಾಹಕರ ಮೆಚ್ಚುಗೆ ಗಳಿಸಿಕೊಂಡಿರುವ ಹೆಗ್ಗಳಿಕೆ ಇದ್ದರೆ ಅದು ‘ಎಸ್ಎಲ್ವಿ’ಗೆ ಸಲ್ಲುತ್ತದೆ.
ಎಸ್ಎಲ್ವಿ ಉತ್ಪನ್ನಗಳು- ‘ವೈಟ್ಸ್ಪೇಸ್’
ಪೆನ್, ಪೆನ್ಸಿಲ್ನಿಂದ ಆರಂಭಿಸಿ ಪಠ್ಯಪುಸ್ತಕಗಳವರೆಗೂ ಸ್ಟೇಷನರಿ ಉತ್ಪನ್ನಗಳು ‘ಎಸ್ಎಲ್ವಿ’ ಮೂಲಕ ತಯಾರಾಗುತ್ತಿವೆ. ‘ವೈಟ್ಸ್ಟೇಸ್’ ಎನ್ನುವ ಬ್ರ್ಯಾಂಡ್ನಲ್ಲಿ ಪೆನ್, ಪೆನ್ಸಿಲ್, ರಬ್ಬರ್, ಕ್ರೆಯಾನ್ಸ್, ಜ್ಯಾಮೆಟ್ರಿ ಬಾಕ್ಸ್ ಹೀಗೆ ಎಲ್ಲಾ ಸ್ಟೇಷನರಿ ಸಾಮಾಗ್ರಿಗಳು ಎಸ್ಎಲ್ವಿ ಮೂಲಕ ಉತ್ಪಾದನೆಯಾಗುತ್ತವೆ. ಎಸ್ಎಲ್ವಿ ಉತ್ಪಾದಿಸುವ ‘ವೈಟ್ಸ್ಪೇಸ್’ ಹೆಸರಿನ ನೋಟ್ಬುಕ್ಗಳು ತಮ್ಮದೇ ಆದ ಬ್ರ್ಯಾಂಡ್ ವಾಲ್ಯೂವನ್ನು ಸೃಷ್ಟಿಸಿಕೊಂಡಿವೆ. ಈಗಾಗಲೇ ಪೂರೈಕೆ ಮಾಡಲು ಸಾಧ್ಯವಾಗದಷ್ಟು ಬೇಡಿಕೆಯನ್ನು ಸಂಸ್ಥೆಯ ಉತ್ಪನ್ನಗಳು ಗಳಿಸಿಕೊಂಡಿವೆ. ನೋಟ್ಬುಕ್ಗಳನ್ನು ಕಸ್ಟಮೈಸ್ ಕೂಡ ಮಾಡಿಕೊಡುವ ವ್ಯವಸ್ಥೆಯಿದ್ದು, ಸುಮಾರು 1 ಸಾವಿರ ಶಾಲೆಗಳಿಗೆ ಆಯಾ ಶಾಲೆಗಳ -ಟೋ, ಲೋಗೋವನ್ನು ಹಾಕಿ ಕಸ್ಟಮೈಸ್ಡ್ ಮಾಡಿಕೊಡಲಾಗುತ್ತಿದೆ. ಪ್ರತೀ ವರ್ಷ ಹೊಸ ಉತ್ಪನ್ನಗಳನ್ನು ಸಂಸ್ಥೆಯು ಪರಿಚಯಿಸಿಕೊಂಡು ಬಂದಿದ್ದು, ಇದೀಗ ವಿವಿಧ ಸ್ಟೇಷನರಿ ಉತ್ಪನ್ನಗಳನ್ನು ಹೊಂದಿರುವ ಗಿಫ್ಟ್ ಬಾಕ್ಸ್ಗಳನ್ನು ರೂಪಿಸಲಾಗಿದೆ. ಜೊತೆಗೆ ಜೆರಾಕ್ಸ್ ಮೆಷಿನ್ಗಳಿಗೆ ಬೇಕಾಗುವ ಎ4 ಶೀಟ್ಗಳ ತಯಾರಿಕೆಗೂ ಸಂಸ್ಥೆಯು ಮುಂದಾಗಿದ್ದು, 75 ಮತ್ತು 80 ಜಿಎಸ್ಎಂನ ಅತ್ಯುತ್ತಮ ಗುಣಮಟ್ಟದ ಎ4 ಶೀಟ್ಗಳು ‘ವೈಟ್ಸ್ಪೇಸ್’ ಹೆಸರಿನಲ್ಲೇ ಸದ್ಯವೇ ಮಾರುಕಟ್ಟೆಗೆ ಬರಲಿದೆ.
ಪಬ್ಲಿಕೇಶನ್
ಎಸ್ಎಲ್ವಿ ಸಂಸ್ಥೆಯ ಅಽನದಲ್ಲಿ ವಿದ್ಯಾಭವನ ಮತ್ತು ವಿಸ್ತಾರ ಎನ್ನುವ ಪ್ರಕಾಶನ ಸಂಸ್ಥೆಗಳು ಕೂಡ ಕಾರ್ಯಾಚರಿಸುತ್ತಿವೆ. ‘ವಿದ್ಯಾಭವನ’ ಪ್ರಕಾಶನದಲ್ಲಿ ಶಾಲಾ ಕಾಲೇಜುಗಳಿಗೆ ಬೇಕಾದ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುತ್ತಿದೆ. ‘ವಿಸ್ತಾರ’ದಲ್ಲಿ ಎಲ್ಕೆಜಿ, ಯುಕೆಜಿ ಸಹಿತ ನರ್ಸರಿ ಮಕ್ಕಳಿಗೆ ಪೂರಕವಾದ ಡಿಜಿಟಲ್ ಕಂಟೆಂಟ್ ಸಹಿತ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುತ್ತಿದ್ದು, ಉತ್ತಮ ಸ್ಪಂದನೆ ದೊರೆತಿದೆ.
‘ಎಸ್ಎಲ್ವಿ’ ಬೆಳೆದುಬಂದ ಹಾದಿ
‘ಎಸ್ಎಲ್ವಿ’ ಸಾಮ್ರಾಜ್ಯದ ಒಡೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕೋಲ್ಪೆ ನೇರ್ಲಾಜೆ ದಿ. ರಾಮದಾಸ್ ಹಾಗೂ ದಿ.ಸುಂದರಿ ರಾಮದಾಸ್ ದಂಪತಿಯ ಪುತ್ರ ದಿವಾಕರ್ದಾಸ್ ನೇರ್ಲಾಜೆ. 1997ರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿದ ದಿವಾಕರ್ದಾಸ್ ನೇರ್ಲಾಜೆಯವರು ಉದ್ಯೋಗ ಅರಸುತ್ತಾ ಬೆಂಗಳೂರಿಗೆ ತೆರಳಿದ್ದರು. ಆರಂಭದಲ್ಲಿ ಬೆಂಗಳೂರಿನ ಯಶವಂತಪುರದ ಹೊಟೆಲೊಂದರಲ್ಲಿ ಸ್ಟಿವರ್ಡ್ ಹುದ್ದೆಗೆ ಸಂದರ್ಶನಕ್ಕೆ ತೆರಳಿದ್ದರು. ಅಲ್ಲಿ ಒಂದು ತಿಂಗಳ ಬಳಿಕ ಕೆಲಸಕ್ಕೆ ಜಾಯಿನ್ ಆಗಿ ಎಂದು ಹೇಳಿದ್ದರು. ಒಂದು ತಿಂಗಳು ಕಾಯುವ ಪರಿಸ್ಥಿತಿಯಲ್ಲಿ ಅವರು ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಮರುದಿನ ಪತ್ರಿಕೆಯಲ್ಲಿದ್ದ ಜಾಹೀರಾತು ನೋಡಿ ಉಪ್ಪಿನಕಾಯಿ ತಯಾರಿಕಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಉಪ್ಪಿನಕಾಯಿ ಮಾರಾಟದ ಮೂಲಕ ಸೇಲ್ಸ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲಿ ಒಂದು ವರ್ಷ ಕೆಲಸ ಮಾಡಿ ಮತ್ತೊಂದು ಕಡೆ ಕೆಲಸ ಮಾಡಿ ಬಳಿಕ ‘ಎಂಬಿಡಿ ಬುಕ್ಸ್’ನಲ್ಲಿ ಕೆಲಸಕ್ಕೆ ಸೇರುವ ಮೂಲಕ ಪುಸ್ತಕ, ಸ್ಟೇಷನರಿಗಳ ಮಾರಾಟ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ಗಿಟ್ಟಿಸಿಕೊಂಡು ಮೊದಲ 3 ತಿಂಗಳು ಬಿಜಾಪುರದಲ್ಲಿ ಕೆಲಸ ಮಾಡಿ, ಬಳಿಕ ಮೈಸೂರು, ಮಂಗಳೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸಿದರು. ಸಂಸ್ಥೆಯಲ್ಲಿ 13 ವರ್ಷಗಳ ಕಾಲ ಕೆಲಸ ಮಾಡಿ ಅತ್ಯುತ್ತಮ ಸಿಬ್ಬಂದಿ ಎಂದು ಗುರುತಿಸಿಕೊಂಡ ಬಳಿಕ ನಾನೇ ಯಾಕೆ ಸ್ವಂತ ಉದ್ದಿಮೆ ಆರಂಭಿಸಬಾರದು ಎಂದು ಯೋಚಿಸಿ, ಕೆಲಸ ಮಾಡುತ್ತಿದ್ದ ಕಂಪನಿ ತೊರೆದು, ‘ಎಸ್ಎಲ್ವಿ ಬುಕ್ ಏಜೆನ್ಸೀಸ್’ ಸಂಸ್ಥೆಯನ್ನು ಆರಂಭಿಸಿದರು. ಮೊದಲಿಗೆ ‘ಎಂಬಿಡಿ ಬುಕ್ಸ್’ ಕಂಪನಿಯ ಕೋರಿಕೆಯಂತೆ ಅದೇ ಕಂಪನಿಯ ಬುಕ್ಸ್ ಡಿಸ್ಟ್ರಿಬ್ಯೂಷನ್ ಮೂಲಕ, 3 ಜನರಿಂದ ಆರಂಭಗೊಂಡ ಎಸ್ಎಲ್ವಿ ಸಂಸ್ಥೆ ಈಗ ಸ್ವಂತ, ಬೃಹತ್ ಉದ್ದಿಮೆಯಾಗಿ ಸುಮಾರು 200 ಮಂದಿಗೆ ಉದ್ಯೋಗ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ದಿನವೂ ಬೆಳೆಯುತ್ತಿದೆ.
ರಾಜ್ಯದೆಲ್ಲೆಡೆ ‘ಎಸ್ಎಲ್ವಿ’
ಒಂದೂವರೆ ದಶಕದ ಹಿಂದೆ ಆರಂಭಗೊಂಡಿರುವ ಎಸ್ಎಲ್ವಿ ಬುಕ್ ಏಜೆನ್ಸಿ, ಎಸ್ಎಲ್ವಿ ಗ್ರೂಪ್ 16 ವರ್ಷಗಳನ್ನು ಪೂರೈಸಿದೆ. ಮೈಸೂರಿನಲ್ಲಿ ಉತ್ಪಾದನಾ ಘಟಕವನ್ನು ಹೊಂದಿದ್ದು, ಕೇಂದ್ರ ಕಚೇರಿಯೂ ಮೈಸೂರಿನಲ್ಲಿದೆ. ಜೊತೆಗೆ ಮೈಸೂರು, ಮಂಗಳೂರು, ಬೆಂಗಳೂರು, ಚಾಮರಾಜನಗರ, ಶಿವಮೊಗ್ಗಗಳಲ್ಲಿ ಶಾಖೆಗಳನ್ನು ಹೊಂದಿಕೊಂಡು ಕಾರ್ಯಾಚರಿಸುತ್ತಿದೆ. 200ಕ್ಕೂ ಸಿಬ್ಬಂದಿಗಳು ಸಂಸ್ಥೆಯಲ್ಲಿದ್ದಾರೆ. ಉತ್ಪಾದನೆ ಹೆಚ್ಚು ನಡೆಯುವ ಸಂದರ್ಭದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ರಾಜ್ಯದಾದ್ಯಂತ ಸುಮಾರು 1500ಕ್ಕೂ ಅಧಿಕ ಶಾಲೆಗಳಿಗೆ ಪುಸ್ತಕಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಜೊತೆಗೆ ಕೇರಳ, ಹೈದರಾಬಾದ್, ತಮಿಳುನಾಡು ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಬೆಂಗಳೂರಿನ ಆರ್ಎನ್ಎ ಸ್ಕೂಲ್, ಮೈಸೂರಿನ ಸೈಂಟ್ ಜೋಸೆ- ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಕ್ರೈಸ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಮಂಗಳೂರಿನ ಶಾರದಾ ಸಮೂಹ ವಿದ್ಯಾಸಂಸ್ಥೆಗಳು, ಪುತ್ತೂರಿನ ಸುದಾನ ವಿದ್ಯಾಸಂಸ್ಥೆ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಕಾವು ಬುಶ್ರಾ ವಿದ್ಯಾಸಂಸ್ಥೆ, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆ ಸಹಿತ ಅನೇಕ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ಎಸ್ಎಲ್ವಿ ಸಂಸ್ಥೆಯ ಉತ್ಪನ್ನಗಳೇ ಪೂರೈಕೆಯಾಗುತ್ತಿವೆ. ಗುಣಮಟ್ಟದ ಉತ್ಪನ್ನಗಳ ಜೊತೆಗೆ ಉತ್ತಮ ಡಿಸ್ಕೌಂಟ್ನ್ನು ಕೂಡ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು, ಪೋಷಕರಿಗೆ ‘ಎಸ್ಎಲ್ವಿ’ ಅಚ್ಚುಮೆಚ್ಚಾಗಿದೆ.
ಸಮಾಜಸೇವಕ – ಕೊಡುಗೈದಾನಿ
ನೇರ್ಲಾಜೆಯವರು ಆರಂಭದಿಂದಲೂ ಕಷ್ಟವನ್ನು ನೋಡಿಕೊಂಡೇ ಬೆಳೆದವರು. ವಾರಾಂತ್ಯದ ದಿನಗಳಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು, 5ನೇ ತರಗತಿಯಿಂದಲೇ ತಮ್ಮ ಶಿಕ್ಷಣದ ವೆಚ್ಚವನ್ನು ತಾವೇ ಭರಿಸಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದಿಗೂ ಅದೆಷ್ಟೋ ಮಂದಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ. ತನ್ನ ದುಡಿಮೆಯ ಒಂದಂಶವನ್ನು ಸಮಾಜಸೇವೆಗೆಂದು ಮೀಸಲಿಟ್ಟಿರುವ ದಿವಾಕರದಾಸ್ ನೇರ್ಲಾಜೆಯವರು ಊರಿನ ಅನೇಕ ದೈವ-ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶಕ್ಕೆ ಉದಾರ ದೇಣಿಗೆ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಅನೇಕ ದೇವಾಲಯಗಳ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ತಮ್ಮ ವತಿಯಿಂದ ಹೂವಿನ ಅಲಂಕಾರ ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ. ಇತ್ತೀಚೆಗೆ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶ್ರೀದೇವೀ ಮಹಾತ್ಮೆ ಯಕ್ಷಗಾನವನ್ನು ಮೈಸೂರಿನಲ್ಲಿ ಆಯೋಜಿಸಿ, ಮೈಸೂರಿನ ಮಂದಿಗೆ ಯಕ್ಷಗಾನದ ರಸದೌತಣ ಉಣಬಡಿಸಿದ್ದರು.
ನೌಕರ-ಸಿಬ್ಬಂದಿಗೆ ಉಚಿತ ಊಟ-ಉಪಹಾರ- ಎಕ್ಸಿಕ್ಯೂಟಿವ್ಸ್ಗೆ ಕಾರ್
ತಾವು ಸ್ವತಃ ನೌಕರರಾಗಿ ಕೆಲಸ ಮಾಡಿ ಬೆಳೆದ ದಿವಾಕರದಾಸ್ ನೇರ್ಲಾಜೆಯವರು ನೌಕರರ ಕಷ್ಟವನ್ನು ಹತ್ತಿರದಿಂದ ಬಲ್ಲವರು. ಹೀಗಾಗಿ ತಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿ, ನೌಕರರು ದುಡಿಯುವ ಸಂಬಳ ಅವರಿಗೆ ಉಳಿತಾಯ ಆಗಬೇಕೆಂಬ ನಿಟ್ಟಿನಲ್ಲಿ ಮೈಸೂರಿನ ತಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಂದಿಗೆ ಕೂಡ ಕಂಪನಿಯ ವತಿಯಿಂದಲೇ ಮಧ್ಯಾಹ್ನದ ಊಟ, ಬೆಳಿಗ್ಗೆ, ಸಂಜೆಯ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಜೊತೆಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಎಲ್ಲಾ 14 ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಗಳಿಗೂ ಕಾರು ನೀಡಿದ್ದಾರೆ. ಈ ಮೂಲಕ ಆದರ್ಶ ಉದ್ಯಮಿ ಅನಿಸಿಕೊಂಡಿದ್ದಾರೆ.
ಹುಟ್ಟಿದ ಊರಿಗೆ ಕೊಡುಗೆ ನೀಡಬೇಕೆನ್ನುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಔಟ್ ಲೆಟ್ ಆರಂಭ
ಕ್ಯಾಲಿಬರ್ ಬೈಕ್ನಿಂದ ನನ್ನ ಕೆಲಸ ಶುರುವಾಗಿತ್ತು. ಇವತ್ತು ಮರ್ಸಿಡಿಝ್ ಬೆಂಝ್ ಕೂಡ ಇದೆ. ಇಂದು ನಾನಿರುವ ಹಂತದ ಬಗ್ಗೆ ಖುಷಿಯಿದೆ. ಆದರೆ ನಾನು ಉದ್ಯಮದಲ್ಲಿ ಸಾಕಷ್ಟು ದುಡ್ಡು ಮಾಡಬೇಕು, ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡಬೇಕು ಎನ್ನುವ ಆಸೆಯೇ ನನಗೆ ಇಲ್ಲ. ನನ್ನ ಕೆಲಸ ನಾನು ಮಾಡಬೇಕು, ನನ್ನಿಂದ ನಾಲ್ಕು ಜನರಿಗೆ ಸಹಾಯ ಆಗಬೇಕು ಎನ್ನುವುದಷ್ಟೇ ನನ್ನ ಆಸೆ. ಹೀಗಾಗಿ ನಾನು ಯಾವತ್ತೂ ಸಮಯ ವ್ಯರ್ಥ ಮಾಡುವುದಿಲ್ಲ. ಉತ್ತಮ ಸ್ನೇಹಿತರನ್ನು ದೇವರು ನೀಡಿದ್ದಾರೆ. ಉತ್ತಮ ಬೆಂಬಲ ಸಿಗುತ್ತಿದೆ. ಇದೀಗ ಪುತ್ತೂರಿನ ಜನತೆಯ ಬೇಡಿಕೆಯಂತೆ ನಾನು ಹುಟ್ಟಿದ ಊರು ಪುತ್ತೂರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಆಸೆಗೆ ಪೂರಕವಾಗಿ ‘ಎಸ್ಎಲ್ವಿ’ಯ ಔಟ್ಲೆಟ್ನ್ನು ಪುತ್ತೂರಿನಲ್ಲಿ ಆರಂಭಿಸುತ್ತಿದ್ದೇವೆ. ಈ ಮಳಿಗೆಯ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಕೊಡುಗೆಗಳನ್ನೂ ನೀಡಲಿದ್ದೇವೆ. ಎಂದಿನಂತೆ ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರವನ್ನು ಬಯಸುತ್ತಿದ್ದೇವೆ.
ದಿವಾಕರ್ ದಾಸ್ ನೇರ್ಲಾಜೆ , ಆಡಳಿತ ನಿರ್ದೇಶಕರು, ಎಸ್.ಎಲ್.ವಿ.ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.
