





ಪುತ್ತೂರು: ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಸಿಟಿ ಸೆಂಟರ್ ಕಲೆಕ್ಷನ್ ಮಳಿಗೆಯಲ್ಲಿ ವಿವಾಹ ವಿಭಾಗದ ಉದ್ಘಾಟನೆಯು ನ.16 ರಂದು ನೆರವೇರಲಿದೆ.


ಟಿ.ವಿ ನಿರೂಪಕಿ ಹೇಮಾ ಜಯರಾಮ್ ವಿವಾಹ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ 15 ಸದಸ್ಯರಿಗೆ ಉಚಿತ ಕುಕ್ಕರ್ ನೀಡಲಾಗುತ್ತಿದ್ದು, ಇದರ ಡ್ರಾ ವಿಜೇತರನ್ನು ಡೆಂಟರ್ ಕೇರ್ ನ ಡಾ.ಸುಪ್ರೀತಾ ರೈ, ಸಿಟಿ ಸೆಂಟರ್ ಮಾಲಕಿ ಎಂ.ಜಿ ಮೈಮುನರವರು ನೆರವೇರಿಸಲಿದ್ದಾರೆ. 2025ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆಯಾದ ಉಬಾರ್ ಸ್ಪೋರ್ಟಿಂಗ್ ಕ್ಲಬ್, ಉಪ್ಪಿನಂಗಡಿ/ಉಬಾರ್ ಡೋನರ್ಸ್ ಹೆಲ್ಪ್ ಲೈನ್ ಉಪ್ಪಿನಂಗಡಿ ಇದರ ಅಧ್ಯಕ್ಷರಾದ ಶಬ್ಬೀರ್ ಕೆಂಪಿರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಿದ್ದೇವೆ ಎಂದು ಸಿಟಿ ಸೆಂಟರ್ ಪ್ರಕಟಣೆ ತಿಳಿಸಿದೆ.













