ಉಪ್ಪಿನಂಗಡಿ ಸಿಟಿ ಸೆಂಟರ್ ಕಲೆಕ್ಷನ್ ನಲ್ಲಿ ವಿವಾಹ ವಿಭಾಗದ ವಸ್ತ್ರಗಳ ಉದ್ಘಾಟನೆ

0

ಪುತ್ತೂರು: ಉಪ್ಪಿನಂಗಡಿ ಹಳೆ ಬಸ್ಸು ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಸಿಟಿ ಸೆಂಟರ್ ಕಲೆಕ್ಷನ್ ಮಳಿಗೆಯಲ್ಲಿ ವಿವಾಹ ವಿಭಾಗದ ವಿವಿಧ ವಿನ್ಯಾಸಗಳ ವಸ್ತ್ರಗಳ ಉದ್ಘಾಟನೆಯು ನ.16 ರಂದು ನೆರವೇರಿತು.

ಟಿ.ವಿ ನಿರೂಪಕಿ ಹೇಮಾ ಜಯರಾಮ್ ರವರು ವಿವಿಧ ವಿನ್ಯಾಸವುಳ್ಳ ವೆಡ್ಡಿಂಗ್ ಕಲೆಕ್ಷನ್ ಸೆಂಟರ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಉಪ್ಪಿನಂಗಡಿ ಸಿಟಿ ಸೆಂಟರ್ ಅನ್ನುವುದು ಉಪ್ಪಿನಂಗಡಿ ಪರಿಸರದ ಜನರಿಗೆ ಗುಣಮಟ್ಟದ ಸಂಸ್ಥೆಯಾಗಿ ಹೊರಹೊಮ್ಮಿದೆ. ಯಾವುದೇ ವ್ಯವಹಾರವಿರಲಿ ಅಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮುಖ್ಯ. ಸಾರಿ ಅನ್ನುವುದು ಅದು ಸಾಂಪ್ರದಾಯಿಕ ಉಡುಗೆ. ಸೀರೆ ಪಾವಿತ್ರ್ಯತೆಯ ಸಂಕೇತ. ಸೀರೆಗೆ ಇರುವ ಪ್ರಾಶಸ್ತ್ಯ ಬೇರೆ ಉಡುಗೆಗಿಲ್ಲ. ಹೆಣ್ಣಿಗೆ ಸಿಂಗಾರ ಅದು ಸೀರೆ. ಉಪ್ಪಿನಂಗಡಿ ಪರಿಸರದಲ್ಲಿ ಈ ಸಿಟ ಸೆಂಟರ್ ಗುಣಮಟ್ಟದ ಸೇವೆ ನೀಡುತ್ತಿದ್ದು  ಇದು ಮತ್ತಷ್ಟು ವಿಸ್ತರಿಸಲಿ ಎಂದರು.

15 ಮಂದಿಗೆ ಉಚಿತ ಕುಕ್ಕರ್
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ 15 ಮಂದಿಗೆ ಉಚಿತ ಕುಕ್ಕರ್ ನೀಡಲಾಗುತ್ತಿದ್ದು ಇದರ ಡ್ರಾ ವಿಜೇತರನ್ನು ಉಪ್ಪಿನಂಗಡಿ ಸೆಂಟರ್ ಕೇರ್ ನ ಡಾ.ಸುಪ್ರೀತಾ ರೈ, ಸಿಟಿ ಸೆಂಟರ್ ಮಾಲಕಿ ಎಂ.ಜಿ ಮೈಮುನಾರವರು ನೆರವೇರಿಸಿದರು. 

ಸಂಸ್ಥೆಯ ಸಿಬ್ಬಂದಿಗಳಾದ ಶೈಲಜಾ, ಸ್ವಾತಿ, ಆಸ್ಮಾ ಅಗ್ನಾಡಿ, ಮಕ್ಸೂದ್ ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಎಂ.ಜಿ ಫರ್ಹಾ, ಜಮೀಲ ಅಬ್ದುಲ್ ಹಮೀದ್, ಸಿಟಿ ಸೆಂಟರ್ ಮಾಲಕ ಎಂ.ಜಿ ಹಮೀದ್ ಸಹಿತ ಹಲವರು ಉಪಸ್ಥಿತರಿದ್ದರು. ಸಿಟಿ ಸೆಂಟರ್ ಸಿಬ್ಬಂದಿ ಸುಮತಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಿಟಿ ಸೆಂಟರ್ ಸಿಬ್ಬಂದಿಗಳು ಸಹಕರಿಸಿದರು.

ಸನ್ಮಾನ
2025ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆಯಾದ ಉಬಾರ್ ಸ್ಪೋರ್ಟಿಂಗ್ ಕ್ಲಬ್, ಉಪ್ಪಿನಂಗಡಿ/ಉಬಾರ್ ಡೋನರ್ಸ್ ಹೆಲ್ಪ್ ಲೈನ್ ಉಪ್ಪಿನಂಗಡಿ ಇದರ ಅಧ್ಯಕ್ಷರಾದ ಶಬ್ಬೀರ್ ಕೆಂಪಿರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here