ಅಂತರ್‌ಶಾಲಾ ಪ್ರಬಂಧ ಸ್ಪರ್ಧೆ: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಧೃತಿ ಪ್ರಥಮ, ವಿನಿಶಾ ಡಿ ಕುನ್ಹಾ ದ್ವಿತೀಯ

0

ಪುತ್ತೂರು: ಕೊಂಬೆಟ್ಟು ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ, ಶ್ರೀರಾಮಕೃಷ್ಣ ಲಿಯೋ ಕ್ಲಬ್ ಮತ್ತು ಇಂಟರ‍್ಯಾಕ್ಟ್ ಕ್ಲಬ್ ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಸವಿನೆನಪಿಗಾಗಿ ಅಂತರ್ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 10ನೇ ತರಗತಿಯ ಧೃತಿ (ಸತೀಶ್ ಮತ್ತು ಶಾಂತ ದಂಪತಿ ಪುತ್ರಿ) ಪ್ರಥಮ ಸ್ಥಾನ ಪಡೆದು ರೂ.3೦೦೦ ನಗದು ಬಹುಮಾನ, ವಿನಿಶಾ ಡಿ ಕುನ್ಹಾ (ಮೆಕ್ಸಿ ಡಿ. ಕುನ್ಹಾ ಮತ್ತು ವನಿತಾ ಡಿಸೋಜಾ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಪಡೆದು 2೦೦೦ ರೂ. ನಗದು ಬಹುಮಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿಯವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here