ನೆಲ್ಯಾಡಿ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಇಲ್ಲಿ ನಡೆದ ನೆಲ್ಯಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ಗೆ ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.
ಹಿರಿಯ ವಿಭಾಗದಲ್ಲಿ ಅವನಿ ಎಸ್.-ಆಶುಭಾಷಣ(ಪ್ರಥಮ), ಪೂರ್ವಿ ಪಿ.ಕೆ-ಇಂಗ್ಲೀಷ್ ಕಂಠಪಾಠ (ಪ್ರಥಮ), ಅಭಿನವ್ ಪ್ರಸಾದ್.ಪಿ.ಡಿ -ಕ್ಲೇ ಮಾಡೆಲಿಂಗ್ (ಪ್ರಥಮ), ಶ್ರೀಶ ಗೌಡ-ಅಭಿನಯ ಗೀತೆ (ದ್ವಿತೀಯ), ಅಭಿನವ್ ರಾಜ್-ಮಿಮಿಕ್ರಿ (ದ್ವಿತೀಯ). ಆದ್ಯ ಎನ್.ಕೆ – ಚಿತ್ರಕಲೆ (ದ್ವಿತೀಯ), ಮನ್ವಿತ್ ಬಿ.ಜೆ.- ಕನ್ನಡ ಕಂಠಪಾಠ (ತೃತೀಯ), ದೇಶ ಭಕ್ತಿ ಗೀತೆ (ದ್ವಿತೀಯ), ನತಾಶ ಜಿನ್ಸ್ -ಕಥೆ ಹೇಳುವುದು (ತೃತೀಯ), ಅನ್ಷಿ-ಕನ್ನಡ ಪ್ರಬಂಧ ರಚನೆ (ತೃತೀಯ)ಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಿರಿಯ ವಿಭಾಗದಲ್ಲಿ ಇವಾನಿಯ ಕೆ.ಪ್ರವೀಣ್ -ಕಥೆ ಹೇಳುವುದು (ಪ್ರಥಮ), ಸಾನಿಧ್ಯ ಡಿ- ಆಶುಭಾಷಣ (ಪ್ರಥಮ), ಸಾನ್ಷಿಯ ಮರಿಯ -ಇಂಗ್ಲೀಷ್ ಕಂಠಪಾಠ (ದ್ವಿತೀಯ), ಅಬ್ದುಲ್ ರಹಿಮಾನ್ ರೌಶನ್ -ಚಿತ್ರಕಲೆ (ದ್ವಿತೀಯ), ಅಬ್ದುಲ್ ರಹಿಮಾನ್ ರೌಶನ್ – ಅರೇಬಿಕ್ ಧಾರ್ಮಿಕ ಪಠಣ (ತೃತೀಯ)ದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್, ಸಹ ಸಂಚಾಲಕರಾದ ಡೀಕನ್ ಜಾರ್ಜ್, ಮುಖ್ಯಗುರು ಸಿಬಿಚ್ಚನ್ ಟಿ.ಸಿ., ಶಾಲೆಯ ಸಿಬ್ಬಂದಿ ವರ್ಗದವರು ಮಾರ್ಗದರ್ಶನ ನೀಡಿದ್ದರು.