





ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರ ಕುಂಬ್ರಕ್ಕೆ ಒಳಪಡುವ 10 ಸರಕಾರಿ ಪ್ರಾಥಮಿಕ ಶಾಲೆಗಳು ಹಾಗೂ 2 ಅನುದಾನಿತ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲಾರಂಜಿತ 2025 ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ದರ್ಬೆತ್ತಡ್ಕದಲ್ಲಿ ನ.22ರಂದು ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ವಿದ್ಯಾರ್ಥಿಗಳಿಗೆ ಶುಭಹಾರೈಸಿ, ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು ಆದಷ್ಟು ಬೇಗ ಇಲ್ಲಿಗೆ ಅತಿಥಿ ಶಿಕ್ಷಕರು ಅಥವಾ ಪೂರ್ಣ ಕಾಲಿಕ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಇಲಾಖೆಯನ್ನು ವಿನಂತಿಸಿದರು. ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದ ಬಾಲಕೃಷ್ಣ ರೈ ಸೇರ್ತಾಜೆ ವಿದ್ಯಾರ್ಥಿಗಳ ಬಾಳಿನಲ್ಲಿ ಇಂತಹ ಸ್ಪರ್ಧೆಗಳು ಮುಂದಿನ ಜೀವನಕ್ಕೆ ದಾರಿದೀಪ ಎಂದು ಶುಭ ಹಾರೈಸಿದರು. ಹಿಂಗಾರ ಅರಳಿಸಿ ಉದ್ಘಾಟಿಸಿದ ನವೀನ್ ಸ್ಟೀಫನ್ ವೇಗಸ್ ವಿದ್ಯಾರ್ಥಿಗಳು ಗೆಲ್ಲಲೇಬೇಕು ಎನ್ನುವ ಛಲದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಕರೆ ನೀಡಿದರು. ಪೋಷಕರು ಮಕ್ಕಳಿಗೆ ತಮ್ಮ ಸಮಯ ನೀಡುವುದರ ಮಹತ್ವವನ್ನು ಕಿವಿಮಾತು ಹೇಳಿದರು. ಗ್ರಾಮ ಪಂಚಾಯತಿ ಸದಸ್ಯರಾದ ರೇಖಾ ಯತೀಶ್ ಬಿಜತ್ರೆ , ಶಿಕ್ಷಣ ಸಂಯೋಜಕರಾದ ಹರಿಪ್ರಾಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ರಾಮಣ್ಣ ರೈ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.






ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರದೀಪ್ ಅಜಲಡ್ಕ, ಶಾರದಾ, ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಸೀತಾರಾಮ ಗೌಡ, ಸರಕಾರಿ ನೌಕರರ ಸಂಘದ ಪುತ್ತೂರು ಘಟಕದ ಸದಸ್ಯರಾದ ಜೂಲಿಯಾನ ಮೋರಸ್, ಎಸ್ ಡಿ ಎಂ ಸಿ ಅಧ್ಯಕ್ಷ ಶುಭಕರ ನಾಯಕ್, ಉಪಾಧ್ಯಕ್ಷೆ ರಾಜೇಶ್ವರಿ, ನಿವೃತ್ತ ಮುಖ್ಯಗುರು ಮೋಹನ್ ರಾಜ್ ಉಪಸ್ಥಿತರಿದ್ದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧಕರಾದ ಅಂತರಾಷ್ಟ್ರೀಯ ಕ್ರೀಡಾಪಟು ಶಾಲೆಯ ಹಿರಿಯ ವಿದ್ಯಾರ್ಥಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಅಧ್ಯಾಪಕ ವೆಂಕಟೇಶ್ ಪ್ರಸಾದ್ ಕುಂಟಾಪು, NMMS ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ರಾಜ್ಯ ಮಟ್ಟದ ಕರಾಟೆ ಪಟು ಬಹುಮುಖ ಪ್ರತಿಭೆಯ ಸಾಧಕಿ ಸ್ಮೃತಿ ಪಲ್ಲತ್ತಾರು, ದಾನಿಗಳಾದ ಸುಧಾಕರ ರೈ ಸೇರ್ತಾಜೆ ಇವರಿಗೆ ವೇದಿಕೆಯಲ್ಲಿ ಗೌರವ ಸನ್ಮಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ವೆಂಕಟೇಶ್ ಪ್ರಸಾದ್ ಮಾತನಾಡಿದರು.
ಸೀತರಾಮ ರೈ ಚೆಲ್ಯಡ್ಕ ಎಂ ಆರ್ ಪಿ ಎಲ್ ಮಂಗಳೂರು , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ, ಉಪಾಧ್ಯಕ್ಷ ತಾರಾನಾಥ ರೈ ಸೇರ್ತಾಜೆ, ,ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ ಮಣಿಯಾಣಿ ಕೊಪ್ಪಳ, ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್ ಮಣಿಯಾಣಿ ಕೊಪ್ಪಳ, ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ರಮೇಶ್ ಸುವರ್ಣ, ಕೋಟಿ ಚೆನ್ನಯ ಗರಡಿ ಮೊಕ್ತೇಸರರಾದ ಜಯರಾಮ ಪೂಜಾರಿ ಕುಕ್ಕುತ್ತಡಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮಾಧವ ಅಜಲಡ್ಕ, ನಿವೃತ್ತ ಮುಖ್ಯ ಗುರು ನಾರಾಯಣ ಮಣಿಯಾಣಿ ,ನಿವೃತ್ತ ಶಿಕ್ಷಕರಾದ ಶಂಕರಿ , ಚೆನ್ನಪ್ಪ ಗೌಡ ಕುದ್ಕಲ್, ನಿವೃತ್ತ ಎಫ್ ಡಿಸಿ ಶ್ರೀಧರ ಪೂಜಾರಿ, ಸಂತೋಷ್ ಆಚಾರ್ಯ ಚೆಲ್ಯಡ್ಕ, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕವೃಂದ ,ಅಕ್ಷರದಾಸೋಹ ಸಿಬ್ಬಂದಿ, ಕಾರ್ಯಕ್ರಮ ದ ಯಶಸ್ಸಿಗೆ ಸಹಕರಿಸಿದರು. ಶಾಲಾ ಬ್ಯಾಂಡ್ ವಾದ್ಯ ಘೋಷದೊಂದಿಗೆ ಸರ್ವ ಅತಿಥಿಗಳನ್ನು ಎಸ್ ಡಿ ಎಂ ಸಿ ಹಾಗೂ ಶಿಕ್ಷಕವೃಂದ ಸ್ವಾಗತಿಸಿದರು. ಬೆಳಿಗ್ಗೆ ಮತ್ತು ಸಂಜೆ ಲಘು ಉಪಾಹಾರ, ಹಾಗೂ ಮಧ್ಯಾಹ್ನ ಸಿಹಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ವಾತಾವರಣ ಹಸುರಿನಿಂದ ಕಂಗೊಳಿಸಿದ ಶಾಲಾ ಆವರಣ ಸಜಂಕಾಡಿ ಶಾಲೆಯ ಜಿ ಪಿ ಟಿ ಶಿಕ್ಷಕರಾದ ಗಣೇಶ್ ನಾಯಕ್ ಇವರ ಕೈ ಚಳಕದಲ್ಲಿ ಮೂಡಿಬಂದ ಸೆಲ್ಫೀ ಕಾರ್ನರ್ ,ವಿಜಯವೇದಿಕೆ, ಎಸ್ ಡಿ ಎಂ ಸಿ ಹಾಗೂ ಹಿರಿಯ ವಿದ್ಯಾರ್ಥಿಗಳು ಮಾಡಿದ ಸತ್ಕಾರ ಮಂಟಪ ಹುಲ್ಲಿನ ಕುಟೀರ, ಮಕ್ಕಳು ಮಾಡಿದ ಗೂಡು ದೀಪದೊಂದಿಗೆ ಶಾಲೆಯಲ್ಲಿ ಹಬ್ಬದ ವಾತಾವರಣ ಮೂಡಿತ್ತು.
ಶಾಲಾ ವಿದ್ಯಾರ್ಥಿಗಳು ನಾಡಗೀತೆಯೊಂದಿಗೆ ಪ್ರಾರ್ಥಿಸಿದರು. ಕುಂಬ್ರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ದೇವಪ್ಪ ಅತಿಥಿಗಳನ್ನು ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕಿ ರಮ್ಯಾ ಎಸ್ ವಂದಿಸಿದರು. ಕೊಯಿಲ ಬಡಗನ್ನೂರು ಶಾಲಾ ಸಹಶಿಕ್ಷಕರಾದ ಗಿರೀಶ್ ಡಿ. ಕಾರ್ಯಕ್ರಮ ನಿರೂಪಿಸಿದರು.










