ಬಾಲಕಿಯರ ರಾಷ್ಟ್ರಮಟ್ಟದ ಸಬ್ ಜೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್ – ರಾಜ್ಯ ತಂಡದ ನಾಯಕಿಯಾಗಿ ರಾಮಕುಂಜ ಕ.ಮಾ.ಪ್ರೌಢಶಾಲೆಯ ರಮ್ಯ ಕೆ.ಎಸ್. ಆಯ್ಕೆ

0

ರಾಮಕುಂಜ: ನ.27ರಿಂದ ನ.30ರ ತನಕ ಹರಿಯಾಣದ ರಾಯತ್ ಬಹರಾ ಇನ್ಸ್ಟಿಟ್ಯೂಟ್, ಚಿಡಾನ, ಟೆಹ್ಸಿಲ್, ಗೊಹಾನ, ಸೋನಿಪತ್‌ನಲ್ಲಿ ನಡೆಯುವ 35ನೇ ಸಬ್ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್‌ಗೆ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರ ಸಬ್ ಜೂನಿಯರ್ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಯು ನ.9ರಂದು ಬೆಂಗಳೂರಿನ ಶ್ರೀ ಕಂಠೀರವ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆಯಿತು.


ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರಮ್ಯ ಕೆ.ಎಸ್. ಅವರು ಬಾಲಕಿಯರ ಕರ್ನಾಟಕ ರಾಜ್ಯ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಕೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿಟ್ಟೇನಹಳ್ಳಿ ನಿವಾಸಿ ಶಶಿಧರ ಹಾಗೂ ಪ್ರೇಮ ದಂಪತಿ ಪುತ್ರಿ. ವಿದ್ಯಾರ್ಥಿನಿಗೆ ಶಾಲಾ ಮುಖ್ಯಗುರು ಸತೀಶ್ ಭಟ್‌ರವರ ಮಾರ್ಗದರ್ಶನದಲ್ಲಿ ಮಾಧವ ಬಿ.ಕೆ., ಜಸ್ವಂತ್, ಮಂಜುನಾಥ್ ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here