





ತ್ರಿಕಾಲ ಪೂಜೆಗೆ ಸಮಾನವೆಂಬ ಮರಾಟಿಗರ ನಂಬಿಕೆ


ಪುತ್ತೂರು: ನರಿಮೊಗರು, ಮುಂಡೂರು ಹಾಗೂ ಶಾಂತಿಗೋಡು ಗ್ರಾಮ ವ್ಯಾಪ್ತಿಯ ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸಂಘದ ಸಮಾಜ ಮಂದಿರದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಶ್ರೀ ದೇವಿ ಮಹಮ್ಮಾಯೆ ಅಮ್ಮನವರ ಗೋಂದೋಳು ಪೂಜೆಯು ನ.21 ರಂದು ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಪ್ರಸ್ತುತ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರುರವರ ಮುಂದಾಳತ್ವದಲ್ಲಿ ನೆರವೇರಿತು.





ಮಧ್ಯಾಹ್ನ ದೀಪಾರಾಧನೆ, ಸಾಮೂಹಿಕ ಪ್ರಾರ್ಥನೆ, ಅನ್ನಪ್ರಸಾದ, ಸಂಜೆ ಭೈರವ ಆರಾಧನೆ, ಗೋಂದೋಳು ಪೂಜೆ, ಬಲ್ನಾಡು ಸಾಜ ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂಡಳಿಯಿಂದ ಭಜನೆ, ಗುರು ಉಪದೇಶ ಬಳಿಕ ಅನ್ನಸಂತರ್ಪಣೆ, ರಾತ್ರಿ ಲಗೇಲೋ ಸೇವೆ, ಅಮ್ಮನವರ ನುಡಿ ಪ್ರಸಾದ, ಅಮ್ಮನವರ ಗದ್ದುಗೆ ಸೇರುವುದು, ಮಹಾ ಮಂಗಳಾರತಿ, ಪೂಜಾ ಪ್ರಸಾದ ಹಾಗೂ ಅನ್ನಪ್ರಸಾದ ಶ್ರದ್ಧಾಭಕ್ತಿಯಿಂದ ನಡೆಯಿತು.

ಪೂಜೆಯಲ್ಲಿ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ, ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ, ದ.ಕ ಜಿಲ್ಲಾ ಮರಾಟಿ ಸಂಘ ಮಂಗಳೂರು, ಬಂಟ್ವಾಳ ಮರಾಟಿ ಸಮಾಜ ಸೇವಾ ಸಂಘ, ಕಡೇಶಿವಾಲಯ ಮರಾಟಿ ಸಮಾಜ ಸೇವಾ ಸಂಘ, ಅಡ್ಯನಡ್ಕ ಮರಾಟಿ ಸಮಾಜ ಸೇವಾ ಸಂಘ, ಪುಣಚ ದೇವಿನಗರ ಮರಾಟಿ ಸಮಾಜ ಸೇವಾ ಸಂಘ, ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘ, ಈಶ್ವರಮಂಗಲ ಮರಾಟಿ ಸಮಾಜ ಸೇವಾ ಸಂಘ, ಬೆಟ್ಟಂಪಾಡಿ ಮರಾಟಿ ಸಮಾಜ ಸೇವಾ ಸಂಘ, ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ, ಬಲ್ನಾಡು ಸಾಜ ಮರಾಟಿ ಸಮಾಜ ಸೇವಾ ಸಂಘ, ಸುಳ್ಯ ತಾಲೂಕಿನ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಹಾಗೂ ಪದಾಧಿಕಾರಿಗಳು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ವಿ ವಿ.ನಾರಾಯಣ ಭಟ್ ಫ್ಯಾಮಿಲಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ. ಬಿ.ವಿಶ್ವನಾಥ್ ರೈ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್ ರೈ, ವೇದನಾಥ ಸುವರ್ಣ, ಜಯರಾಮ ಪೂಜಾರಿ ಅಲ್ಲದೆ ಸ್ಥಳೀಯ ನಾಯಕರು ಭಾಗವಹಿಸಿದರು.
ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಕೃಷ್ಣ ನಾಯ್ಕ ಎನ್. ಸಂಪ್ಯ, ಕೋಶಾಧಿಕಾರಿ ಈಶ್ವರ ನಾಯ್ಕ ಅಜಲಾಡಿ, ಉಪಾಧ್ಯಕ್ಷರಾದ ಕೊರಗಪ್ಪ ನಾಯ್ಕ ಕಲ್ಲಮ, ಗೋಪಾಲ ನಾಯ್ಕ ಎಲಿಕ ಮತ್ತು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮರಾಟಿ ಯುವ ವೇದಿಕೆ ನರಿಮೊಗರು ಜೊತೆಗೆ ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ವ್ಯಾಪ್ತಿಯ ಭಕ್ತಾದಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.
ಕರಾವಳಿ ಭಾಗದಲ್ಲಿ ಇರುವ ಮರಾಟಿ ಸಂಘಟನೆಗಳಲ್ಲಿ ನರಿಮೊಗರು ಸಮಾಜ ಸೇವಾ ಸಂಘವು ತನ್ನದೇ ಆದ ಕಾರ್ಯ ಚಟುವಟಿಕೆಗಳೊಂದಿಗೆ ಜಿಲ್ಲೆಯಲ್ಲಿ ಚಿರಪರಿಚಿತವಾಗಿದೆ. ವಾರ್ಷಿಕ ಕ್ರೀಡಾಕೂಟ, ಪ್ರವಾಸ, ಸತ್ಯನಾರಾಯಣ ಪೂಜೆ ಹಾಗೂ ಇನ್ನಿತರ ಚಟುವಟಿಕೆಗಳೊಂದಿಗೆ ಪ್ರತಿ ವರ್ಷ ವಾರ್ಷಿಕ ಲೆಕ್ಕಪತ್ರದೊಂದಿಗೆ ಮಹಾಸಭೆ ನಡೆಸಿ ಸ್ಥಳೀಯವಾಗಿ ಮೆಚ್ಚುಗೆ ಗಳಿಸಿದೆ.
-ಬಿ.ಮಹಾಲಿಂಗ ನಾಯ್ಕ, ಸ್ಥಾಪಕಾಧ್ಯಕ್ಷರು ಹಾಗೂ ಪ್ರಸ್ತುತ ಅಧ್ಯಕ್ಷರು








