




ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಡಿ.4 ರಂದು ಗೀತಾ ಜಯಂತಿ ಆಚರಿಸಲಾಯಿತು.



ಕಾರ್ಯಕ್ರಮದ ಅತಿಥಿ ವಿಜಯಲಕ್ಷ್ಮಿ ಶೆಣೈ ಮಾತನಾಡಿ, ವಾರದಲ್ಲಿ ಒಂದು ದಿನವಾದ್ರು ದೇವಸ್ಥಾನಕ್ಕೆ ಹೋಗುವ ಪರಿಪಾಠವನ್ನು ಬೆಳೆಸುವುದು. ಇದರಿಂದ ಧನಾತ್ಮಕ ಚಿಂತನೆ ಹೆಚ್ಚುತ್ತದೆ. ದಿನನಿತ್ಯ ಭಗವದ್ಗೀತೆ ಶ್ಲೋಕ ಪಠಣ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸತ್ಯವನ್ನು ಹೇಳುವ, ಚಂಚಲ ಮನಸ್ಸನ್ನು ಸ್ಥಿರವಾಗಿಡಲು, ದ್ವೇಷ ವೈಷಮ್ಯ ಬೆಳೆಸದೆ ಇರುವುದನ್ನು ಕಲಿಯಲು ಸಾಧ್ಯ. ಎಲ್ಲಾ ವಿದ್ಯಾರ್ಥಿಗಳಿಗೆ ಭಗವಂತ ಸುಖ, ನೆಮ್ಮದಿ ಹಾಗೂ ಶ್ರೇಯಸ್ಸನ್ನು ನೀಡಲಿ ಎಂದು ಹಾರೈಸಿದರು.






ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಯರಾಮ ಕೆದಿಲಾಯ ಮಾತನಾಡುತ್ತಾ ನಮ್ಮ ಶಾಲೆಯಲ್ಲಿ ಹಲವು ವರುಷಗಳಿಂದ ವಿದ್ಯಾರ್ಥಿಗಳು ಭಗವದ್ಗೀತೆ ಪಠಣ ಮಾಡುವುದು ತುಂಬಾ ಸಂತೋಷದ ವಿಷಯ. ಭಗವದ್ಗೀತೆ ಯನ್ನು ಪೂಜಿಸುವುದರ ಜೊತೆಗೆ ಮನಸ್ಸಿನಲ್ಲಿ ಅಧ್ಯಯನ ಮಾಡಬೇಕು ಇದು ನಾವು ಹೇಗೆ ಬದುಕಬೇಕು, ಹೇಗೆ ಬದುಕ ಬಾರದು ಎಂದು ತಿಳಿಸಿಕೊಡುವುದರ ಜೊತೆಗೆ ಕಷ್ಟಗಳಿಂದ ರಕ್ಷಿಸುವ ಶಕ್ತಿ ಭಗವದ್ಗೀತೆಗಿದೆ ಎಂದರು.

ಎಲ್ಲಾ ವಿದ್ಯಾರ್ಥಿಗಳು ಗೀತೆಯ 15 ಮತ್ತು 16 ನೇ ಅಧ್ಯಾಯ ಪಠಣ ಮಾಡಿದರು.ವಿದ್ಯಾರ್ಥಿ ಸಾಯಿ ಸಂಚಿತ್ ಪ್ರಾರ್ಥಿಸಿದರು. ಶಿಕ್ಷಕ ಮುರಳಿ ಕೃಷ್ಣ ವಂದಿಸಿದರು, ರವಿಶಂಕರ್ ನಿರೂಪಿಸಿದರು, ಕಾರ್ಯಕ್ರಮದಲ್ಲಿ ಶಿಕ್ಷಕ – ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










