




ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಅರ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಾರಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಶಾಲೆಯ ವಿದ್ಯಾರ್ಥಿಗಳು ಕಿರಿಯ ಮತ್ತು ಹಿರಿಯ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.





ಕಿರಿಯರ ವಿಭಾಗದಲ್ಲಿ ಶಾರ್ವರಿ – ದೇಶಭಕ್ತಿ ಗೀತೆ(ಪ್ರಥಮ), ಹವೀಶ-ಛದ್ಮವೇಷ(ಪ್ರಥಮ), ಧೃತಿ ವಿ. ಆರ್.-ಅಭಿನಯ ಗೀತೆ(ಪ್ರಥಮ), ಸಾಧ್ವಿ ಕೆ.-ಭಕ್ತಿಗೀತೆ(ಪ್ರಥಮ), ಲಕ್ಷ್ಯ-ಆಶುಭಾಷಣ(ಪ್ರಥಮ), ಸುಹಾ ಸಲ್ಮ-ಧಾರ್ಮಿಕ ಪಠಣ ಅರೇಬಿಕ್(ಪ್ರಥಮ), ರೆಹಾನ್ಶಿ-ಕನ್ನಡ ಕಂಠಪಾಠ(ದ್ವಿತೀಯ), ಅಶ್ವಿತ ಎ.-ಧಾರ್ಮಿಕ ಪಠಣ ಸಂಸ್ಕೃತ(ದ್ವಿತೀಯ), ಯಶಿಕ ಎಸ್. ಪಿ.-ಕಥೆ ಹೇಳುವುದು(ದ್ವಿತೀಯ) ಸ್ಥಾನ ಪಡೆದಿದ್ದಾರೆ.





ಹಿರಿಯರ ವಿಭಾಗದಲ್ಲಿ ಯುಕ್ತಾ ಎ.-ಪ್ರಬಂಧ ರಚನೆ (ಪ್ರಥಮ) ಪ್ರಸ್ತುತ್ ಆರ್. ಶೆಟ್ಟಿ-ಚಿತ್ರಕಲೆ(ಪ್ರಥಮ) ಸಂಜನಾ ಭಟ್-ಭಕ್ತಿಗೀತೆ (ಪ್ರಥಮ), ವರ್ಷಿಣಿ ಪಿ.ಎಸ್-ಅಭಿನಯ ಗೀತೆ (ಪ್ರಥಮ), ಯುಕ್ತಾ ಎ.-ಧಾರ್ಮಿಕ ಪಠಣ ಸಂಸ್ಕೃತ (ಪ್ರಥಮ), ಯಶಸ್ ಬಿ.-ಹಿಂದಿ ಕಂಠಪಾಠ (ದ್ವಿತೀಯ), ಹರ್ಷಿತ ಹೆಚ್.-ಕಥೆ ಹೇಳುವುದು (ದ್ವಿತೀಯ) ಸುಧೀಶ್-ಆಶುಭಾಷಣ (ದ್ವಿತೀಯ), ಶುಭಲಕ್ಷ್ಮಿ ಪಿ. ಎಸ್.-ಕವನವಾಚನ (ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ ಎಂದು ಮುಖ್ಯಶಿಕ್ಷಕು ತಿಳಿಸಿರುತ್ತಾರೆ.








