ಪುತ್ತೂರು: 68 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಸ್ಥಾಪನಾ ದಿನಾಚರಣೆ ಸಹಕಾರ ಸಂಘದ ಕೇಂದ್ರ ಕಚೇರಿ ಪುತ್ತೂರಿನಲ್ಲಿ ಸಹಕಾರ ಸಂಘದ ಅಧ್ಯಕ್ಷ, ವಕೀಲರಾದ ಭಾಸ್ಕರ ಎಂ ಪೆರುವಾಯಿ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಸ್ಥಾಪನಾ ದಿನಾಚರಣೆ ಪ್ರಯುಕ್ತ ನಿರ್ದೇಶಕ ಬಿ.ಎಸ್ ಕುಲಾಲ್ ರವರು ದೀಪ ಬೆಳಗಿಸಿ ಸ್ಥಾಪಕರಾದ ದಿ.ಕೃಷ್ಣ ಮೂಲ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ನಿರ್ದೇಶಕ ಕೃಷ್ಣಪ್ಪ ಮೂಲ್ಯ ಬೆಳ್ಳಾರೆ ಮಾತನಾಡಿ ಸಹಕಾರ ಸಂಘ ಸ್ಥಾಪನೆಯಾಗಿ ಅದರ ಬೆಳವಣಿಗೆಗೆ ಕಾರಣರಾದ ಹಿರಿಯರನ್ನು ನೆನೆದು ಅವರ ದ್ಯೇಯ ಉದ್ದೇಶಗಳನ್ನು ಈಡೇರಿಸುವಲ್ಲಿ ಸ್ಮರಿಸುವುದು ಉತ್ತಮ ಬೆಳವಣಿಗೆ. ಸಹಕಾರ ಸಂಘ ಉತ್ತಮವಾಗಿ ಕಾರ್ಯಚರಿಸುತ್ತಿದೆ. ಎಲ್ಲಾ ವರ್ಗದ ಜನರನ್ನು ತಲುಪಿ ಜನ ಮನ್ನಣೆ ಗಳಿಸಿದೆ ಎಂದು ತಿಳಿಸಿದರು.
ಕುಂಭಶ್ರೀ ಮಾಂಗಲ್ಯ ಠೇವಣಿ ಕರಪತ್ರ ಬಿಡುಗಡೆ
ಸದಸ್ಯರ ಬೆಳವಣಿಗೆಗಾಗಿ ಹಾಗೂ ಅವರ ಮಕ್ಕಳ ಕಲ್ಯಾಣಕ್ಕಾಗಿ ಕುಂಭಶ್ರೀ ಮಾಂಗಲ್ಯ ಠೇವಣಿ ಯೋಜನೆಯ ಕರಪತ್ರವನ್ನು ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ಬಿಡುಗಡೆಗೊಳಿಸಿ ಮಾತನಾಡಿ, ಇದೊಂದು ಉತ್ತಮ ಠೇವಣಿ ಯೋಜನೆಯಾಗಿದ್ದು, ಸದಸ್ಯರಿಗೆ ಹೆಚ್ಚು ಬೆಳವಣಿಗೆ ಕಾಣಲು ಸಾಧ್ಯವಿದೆ. ಎಲ್ಲಾ ಸದಸ್ಯರು ಈ ಠೇವಣಿ ಯೋಜನೆಯನ್ನು ತಮ್ಮ ಹೂಡಿಕೆ ಮಾಡಬೇಕೆಂದು ವಿನಂತಿಸಿದರು.
ನಿರ್ದೇಶಕರಾದ ಗಣೇಶ್ ಕುಲಾಲ್, ರೇಖಾ ಹಾಗೂ ಶಾಖಾ ವ್ಯವಸ್ಥಾಪಕರು, ಮತ್ತು ಸಿಬ್ಬಂದಿಗಳು ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
