ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯ ಪೂರ್ವಭಾಗದಲ್ಲಿರುವ ನಾಗನ ಕಟ್ಟೆಯ ಪಾವಿತ್ರ್ಯತೆ ಕಾಪಾಡುವ ಹಿತದೃಷ್ಟಿಯಿಂದ ರಾತ್ರಿ ಸಮಯ ಹೈಮಾಸ್ಟ್ ಲೈಟ್ ಅಳವಡಿಸುವಂತೆ ಮಹಾಲಿಂಗೇಶ್ವರ ಸಂರಕ್ಷಣಾ ಸಮತಿಯಿಂದ ನಗರಸಭಗೆ ಮನವಿ ಮಾಡಿದ್ದಾರೆ.

ದೇವಸ್ಥಾನದ ಗದ್ದೆಯ ಪೂರ್ವದಲ್ಲಿ ಪುರಾತನವಾಗಿರುವ ನಾಗನ ಕಟ್ಟೆಯಲ್ಲಿ ರಾತ್ರಿ ಸಮಯ ಪೂರ್ತಿ ಕತ್ತಲು ಪ್ರದೇಷವಾಗಿರುವುದರಿಂದ ಅಲ್ಲಿ ಖಾಸಗಿ ವಾಹನಗಳು ಪಾರ್ಕ್ ಮಾಡಿ ಧೂಮಪಾನ, ಮದ್ಯಪಾನ, ಗಾಂಜಾ ಸೇವನೆ ಘಟನೆಗಳು ಈ ಹಿಂದೆ ನಡೆದಿದ್ದು, ಭಕ್ತರ ಸಕಾಲಿಕ ನಿಯಂತ್ರಣದಿಂದ ಯಾವುದೇ ಪಾವಿತ್ರ್ಯತೆಗೆ ಧಕ್ಕೆಯಾಗಿಲ್ಲ. ಆದರೂ ಮುಂದೆ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಬೆಳಕಿನ ವ್ಯವಸ್ಥೆ ಅಳವಡಿಸಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂದರ್ಭ ಶ್ರೀ ಮಹಾಲಿಂಗೇಶ್ವರ ಸಂರಕ್ಷಣಾ ಸಮಿತಿಯ ಬಾಲಚಂದ್ರ ಸೊರಕೆ, ಜಗದೀಶ್ ರೈ, ಶ್ರೀಧರ ಹಿಂದಾರು, ನರೇಶ್ ಕುಮಾರ್ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.